Latest Kannada Nation & World
ರೈಲ್ವೆ ವಲಯಕ್ಕೆ ಬಜೆಟ್‌ನಲ್ಲಿ ಅನುದಾನ ಭಾರೀ ಪ್ರಮಾಣದ ಏರಿಕೆ ಇಲ್ಲ, ಹಿಂದಿನ ವರ್ಷದಂತೆಯೇ 2.65 ಲಕ್ಷ ಕೋಟಿ ರೂ. ನಿಗದಿ

ರೈಲ್ವೆ ಇಲಾಖೆಗೆ ಕಳೆದ ಸಾಲಿನಲ್ಲಿ ರೂ2.62ಲಕ್ಷ ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಬಜೆಟ್‌ನಲ್ಲಿ ರೂ. 2.65 ಲಕ್ಷ ಕೋಟಿ ನೀಡಲಾಗಿದೆ. ಈ ಪೈಕಿ ಪ್ರಯಾಣಿಕರ ಸವಲತ್ತುಗಳಿಗಾಗಿ ರೂ. 12 ಸಾವಿರ ಕೋಟಿ, ಸುರಕ್ಷತೆ ವ್ಯವಸ್ಥೆಗಳಿಗಾಗಿ ರೂ.1,16,500 ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ಇದಕ್ಕಾಗಿ ರೂ.1,14,000 ಕೋಟಿ ನೀಡಲಾಗಿತ್ತು. ಈ ಬಾರಿ ಬಜೆಟ್ 3 ಲಕ್ಷ ಕೋಟಿ ರೂ. ಗೆ ಏರಿಕೆಯಾಗಬಹುದು ಎನ್ನುವ ನಿರೀಕ್ಷೆ ಇತ್ತಾದರೂ ಭಾರೀ ಏರಿಕೆಯೇನೂ ಕಂಡಿಲ್ಲ.