Latest Kannada Nation & World
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 2025ರ ಕೇಂದ್ರ ಬಜೆಟ್ ಬಹಳ ಮುಖ್ಯ ಎಂದು ಹೇಳೋದಕ್ಕೆ 5 ಕಾರಣ

4) ಜಾಗತಿಕ ಅಸ್ಥಿರ ಸನ್ನಿವೇಶ: 2014 ರಲ್ಲಿ, ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯನ್ನು ಗಮನಿಸಿದರೆ ಈಗ ನಿರೀಕ್ಷೆಗಳು ಕಡಿಮೆಯಾಗಿವೆ. 2019 ರಲ್ಲಿ, ಬಜೆಟ್ ಭರವಸೆಯೊಂದಿಗೆ ಬಂದಿತು. ಆದರೆ, ಅಸ್ಥಿರ ಮಾರುಕಟ್ಟೆಯ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಆಡಳಿತ ಬದಲಾವಣೆಯಾಗಿದ್ದು, ಡೊನಾಲ್ಡ್ ಟ್ರಂಪ್ ಜತೆಗಿನ ಸಂಬಂಧ, ಅನಿಶ್ಚಿತ ಜಾಗತಿಕ ಸನ್ನಿವೇಶದಲ್ಲಿ ರೂಪಾಯಿ ಅಪಮೌಲ್ಯೀಕರಣ ಮತ್ತು ಅನಿಶ್ಚಿತ ಜಾಗತಿಕ ಸನ್ನಿವೇಶ ಭಾರತದ ಅರ್ಥ ವ್ಯವಸ್ಥೆಗೆ ಸವಾಲೊಡ್ಡುವಂಥವು. ಭಾರತ ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳ ಮೇಲೆ ಶೇಕಡಾ 100 ರಷ್ಟು ಸುಂಕವನ್ನು ವಿಧಿಸುವುದಾಗಿ ಟ್ರಂಪ್ ಈಗಾಗಲೇ ಬೆದರಿಕೆ ಹಾಕಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಬಜೆಟ್ 2025 ಮಂಡನೆಯಾಗುತ್ತಿದೆ.