Astrology
ನವೆಂಬರ್ 6 ರಂದು ಧನಸ್ಸು ರಾಶಿಗೆ ಶುಕ್ರನ ಪ್ರವೇಶ; ಮೇಷ, ಮಿಥುನ ಸೇರಿದಂತೆ ಈ 6 ರಾಶಿಯವರ ಜೀವನಕ್ಕೆ ಅದೃಷ್ಟ ದೇವತೆ ಆಗಮನ

ಯಾವ ರಾಶಿಯವರಿಗೆ ಏನು ಫಲ?
ಮೇಷ
ಮೇಷ ರಾಶಿಯವರ ಮಾತಿಗೆ ಎಲ್ಲೆಡೆ ಗೌರವ ದೊರೆಯುತ್ತದೆ. ದಾಂಪತ್ಯದಲ್ಲಿ ಇದ್ದ ಅನಾವಶ್ಯಕ ಸಮಸ್ಯೆಗಳು ಸುಲಭವಾಗಿ ದೂರವಾಗಲಿವೆ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಉದ್ಯೋಗದಲ್ಲಿ ಎಲ್ಲರ ಸಹಾಯ ಸಹಕಾರ ದೊರೆಯಲಿದೆ. ವಂಶಕ್ಕೆ ಸೇರಿದ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯಲಿದೆ. ಆದಾಯವು ಮಧ್ಯಮ ಮಟ್ಟದಲ್ಲಿದ್ದರೂ ಬುದ್ಧಿವಂತಿಕೆಯಿಂದ ಹಣ ಉಳಿಸುತ್ತಾರೆ. ಅನಾವಶ್ಯಕವಾಗಿ ಜಗಳ ಕದನಕ್ಕೆ ಒಳಗಾಗದೆ ಶಾಂತಿ ಸಂಧಾನದಿಂದ ಪೂರ್ಣಗೊಳಿಸುವಿರಿ. ಸ್ತ್ರೀಯರು ಉದ್ಯೋಗ ಬದಲಿಸುವ ಸೂಚನೆಗಳಿವೆ. ಆರೋಗ್ಯದ ಸಮಸ್ಯೆಗಳು ದೂರವಾಗಲಿವೆ. ಸಂಗೀತ, ನಾಟ್ಯ ಅಥವ ಬರವಣಿಗೆಯಲ್ಲಿ ಆಸಕ್ತಿ ಇದ್ದರೆ ಉತ್ತಮ ಅವಕಾಶಗಳು ದೊರೆಯುತ್ತವೆ.