ನಾನು ಉತ್ತರ ಕರ್ನಾಟಕದ ಮಣ್ಣಿನ ಮಗ; ಕೆಜಿಗಟ್ಟಲೆ ಚಿನ್ನ ಧರಿಸಿ ನರಕಕ್ಕೆ ಕಾಲಿಟ್ಟ ಗೋಲ್ಡ್ ಸುರೇಶ್-bigg boss kannada season 11 contestants list gold suresh enters bbk 11 colors kannada reality show jra ,ಮನರಂಜನೆ ಸುದ್ದಿ

ಗೋಲ್ಡ್ ಸುರೇಶ್: ಬಿಗ್ ಬಾಸ್ ವೇದಿಕೆಗೆ ನಟನೆಯ ಹಿನ್ನೆಲೆ ಹೊರತಾಗಿ ವ್ಯವಹಾರ ಕ್ಷೇತ್ರದ ಸ್ಪರ್ಧಿ ಎಂಟ್ರಿ ಕೊಟ್ಟಿದ್ದಾರೆ. ಅವರೇ ಗೋಲ್ಡ್ ಸುರೇಶ್. ಮೈಮೇಲೆ ಒಂದೂವರೆ ಕೋಟಿ ರೂಪಾಯಿಗೂ ಹೆಚ್ಚು ಬೆಲೆಯ ಕೆಜಿಗಟ್ಟಲೆ ಚಿನ್ನ ಧರಿಸಿ ಬಂದಿರುವ ಸ್ಪರ್ಧಿ ಕುರಿತು ಹಲವರಿಗೆ ಪರಿಚಯ ಇಲ್ಲ. ಇವರು ಬಿಗ್ ಬಾಸ್ ವೇದಿಕೆಗೆ 12ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಬಿಗ್ಬಾಸ್ ಕನ್ನಡ ಸೀಸನ್ 11 ಶುರುವಾಗಿದೆ. ಕಳೆದ ಬಾರಿಯ ಸೀಸನ್ 10ರ ಯಶಸ್ಸಿನ ಬಳಿಕ, ನಿರೀಕ್ಷೆ ಮೂಡಿಸಿದ್ದ ಸೀಸನ್ 11ರಲ್ಲಿ ಯಾರೆಲ್ಲ ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂಬ ಅಚ್ಚರಿಗೆ ಇಂದು ಉತ್ತರ ಸಿಗುತ್ತಿದೆ. ಒಟ್ಟು 16 ಮಂದಿ ಸ್ಪರ್ಧಿಗಳ ಪೈಕಿ ಶನಿವಾರ (ಸೆ 28) ನಾಲ್ಕು ಸ್ಪರ್ಧಿಗಳ ಹೆಸರನ್ನು ರಾಜಾ ರಾಣಿ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ರಿವೀಲ್ ಮಾಡಲಾಗಿತ್ತು. ಅವರಲ್ಲಿ ಸತ್ಯ ಸೀರಿಯಲ್ ನಾಯಕಿ ನಟಿ ಗೌತಮಿ ಜಾಧವ್, ಲಾಯರ್ ಕೆಎನ್ ಜಗದೀಶ್, ಹಿಂದುತ್ವದ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಅವರೊಂದಿಗೆ ಗೋಲ್ಡ್ ಸುರೇಶ್ ಮನೆಗೆ ಕಾಲಿಡುವುದು ಖಚಿತವಾಗಿತ್ತು.