Latest Kannada Nation & World

ನಾಳಿನ ಐಪಿಎಲ್‌ ಪಂದ್ಯಗಳ 10 ಪ್ರಮುಖಾಂಶಗಳು

Share This Post ????

ಐಪಿಎಲ್‌ನಲ್ಲಿ ನಾಳೆ 2 ಪಂದ್ಯಗಳಿವೆ. ಲಕ್ನೋದಲ್ಲಿ ಎಲ್‌ಎಸ್‌ಜಿ ಹಾಗೂ ಗುಜರಾತ್‌ ಟೈಟನ್ಸ್‌ ನಡುವೆ ಮೊದಲ ಪಂದ್ಯ ನಡೆದರೆ, ಹೈದರಾಬಾದ್‌ನಲ್ಲಿ ಎಸ್‌ಆರ್‌ಎಚ್‌ ಹಾಗೂ ಪಂಜಾಬ್‌ ಕಿಂಗ್ಸ್‌ ನಡುವೆ ಎರಡನೇ ಪಂದ್ಯ ನಡೆಯಲಿದೆ.

ಲಕ್ನೋ vs ಗುಜರಾತ್‌, ಹೈದರಾಬಾದ್‌ vs ಪಂಜಾಬ್: ನಾಳಿನ ಐಪಿಎಲ್‌ ಪಂದ್ಯಗಳ 10 ಪ್ರಮುಖಾಂಶಗಳು

ಲಕ್ನೋ vs ಗುಜರಾತ್‌, ಹೈದರಾಬಾದ್‌ vs ಪಂಜಾಬ್: ನಾಳಿನ ಐಪಿಎಲ್‌ ಪಂದ್ಯಗಳ 10 ಪ್ರಮುಖಾಂಶಗಳು (PTI)

ಐಪಿಎಲ್ 2025ರಲ್ಲಿ ನಾಳೆ (ಏಪ್ರಿಲ್‌ 12, ಶನಿವಾರ) ಡಬಲ್‌ ಧಮಾಕಾ. ವಾರಂತ್ಯ ದಿನ ಎರಡೆರಡು ಪಂದ್ಯಗಳು ನಡೆಯುತ್ತಿವೆ. ದಿನದ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಕಾದಾಟ ನಡೆಸಲಿವೆ. ದಿನಕಳೆದಂತೆ ಐಪಿಎಲ್‌ ಟೂರ್ನಿ ರೋಚಕ ಹಂತ ತಲುಪುತ್ತಿದೆ. ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರಗಳು ಮುನ್ನೆಲೆಗೆ ಬರುತ್ತಿದೆ. ನಾಳಿನ ಪಂದ್ಯಕ್ಕೆ ಸಂಬಂಧಿಸಿದ ಪ್ರಮುಖ 10 ಅಂಶಗಳನ್ನು ನೋಡೋಣ.

  • ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯವು ಖಂಡಿತಾ ರೋಚಕವಾಗಿರಲಿದೆ. ಈವರೆಗೆ ನಡೆದ ಪಂದ್ಯಗಳ ಲೆಕ್ಕಾಚಾರದಲ್ಲಿ ಜಿಟಿ ಮೇಲುಗೈ ಸಾಧಿಸಿದೆ. ಆದರೂ ಎರಡೂ ತಂಡಗಳು ಉತ್ತಮ ಫಾರ್ಮ್‌ನಲ್ಲಿವೆ. ನಿಧಾನಗತಿಯ ಆರಂಭದ ನಂತರ ಜಿಟಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಅತ್ತ ಎಲ್‌ಎಸ್‌ಜಿ ಕೂಡ ಸತತ ಎರಡು ಗೆಲುವುಗಳೊಂದಿಗೆ ಫಾರ್ಮ್‌ಗೆ ಮರಳಿದೆ. ಇದೀಗ ತವರಿನಲ್ಲಿ ಲಕ್ನೋ ಅಬ್ಬರಿಸುವ ನಿರೀಕ್ಷೆಯಲ್ಲಿದೆ.
  • ಉಭಯ ತಂಡಗಳು ಈವರೆಗೆ ಐದು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಜಿಟಿ ನಾಲ್ಕರಲ್ಲಿ ಗೆದ್ದಿದೆ. ಈ ತಂಡಗಳು ಕಳೆದ ಬಾರಿ ಲಕ್ನೋದಲ್ಲಿ ಮುಖಾಮುಖಿಯಾದಾಗ, ಎಲ್‌ಎಸ್‌ಜಿ ಗೆದ್ದಿತ್ತು.
  • ಲಕ್ನೋ ಪರ ನಿಕೋಲಸ್ ಪೂರನ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಈವರೆಗೆ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ 288 ರನ್‌ಗಳೊಂದಿಗೆ ಪಂದ್ಯಾವಳಿಯ ಟಾಪ್ ಸ್ಕೋರರ್ ಆಗಿದ್ದಾರೆ. ಇಲ್ಲಿಯವರೆಗೆ 24 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇವರ ಆಕ್ರಮಣಕಾರಿ ಬ್ಯಾಟಿಂಗ್‌ಗೆ 225 ಸ್ಟ್ರೈಕ್ ರೇಟ್ ಸಾಕ್ಷಿ. ಇದೇ ವೇಳೆ ಆರಂಭಿಕ ಆಟಗಾರ ಮಿಚೆಲ್‌ ಮಾರ್ಷ್‌ 265 ರನ್‌ ಪೇರಿಸಿದ್ದಾರೆ.
  • ಎರಡೂ ತಂಡಗಳು ಅಗ್ರ ಕ್ರಮಾಂಕದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಎಲ್‌ಎಸ್‌ಜಿಯ ಅಗ್ರ ಮೂವರು ಬ್ಯಾಟರ್‌ಗಳಾದ ಮಿಚೆಲ್ ಮಾರ್ಷ್ (265 ರನ್‌ಗಳು), ಐಡೆನ್ ಮಾರ್ಕ್ರಾಮ್ (144 ರನ್‌ಗಳು) ಮತ್ತು ಪೂರನ್ (288 ರನ್‌ಗಳು) ಅಬ್ಬರಿಸಿದ್ದಾರೆ. ಅತ್ತ ಜಿಟಿ ಅಗ್ರ ಕ್ರಮಾಂಕದಲ್ಲಿ, ನಾಯಕ ಶುಭ್ಮನ್ ಗಿಲ್ (148 ರನ್), ಸಾಯಿ ಸುದರ್ಶನ್ (273 ರನ್) ಮತ್ತು ಜೋಸ್ ಬಟ್ಲರ್ (202 ರನ್) ಗಳಿಸಿದ್ದಾರೆ.
  • ಈ ಬಾರಿ ಮೊಹಮ್ಮದ್ ಸಿರಾಜ್ ಪವರ್‌ಪ್ಲೇನಲ್ಲಿ ಅತ್ಯಂತ ಅಪಾಯಕಾರಿ ಬೌಲರ್‌ ಎನಿಸಿಕೊಂಡಿದ್ದಾರೆ. ಇದುವರೆಗೆ ಐದು ಇನ್ನಿಂಗ್ಸ್‌ಗಳಲ್ಲಿ 7.7ರ ಎಕಾನಯಲ್ಲಿ ಬೌಲಿಂಗ್‌ ಮಾಡಿ 10 ವಿಕೆಟ್‌ ಪಡೆದಿದ್ದಾರೆ. ಈ ಋತುವಿನಲ್ಲಿ ಪವರ್‌ಪ್ಲೇ ಓವರ್‌ಗಳಲ್ಲಿ ಅವರು ಪಡೆದ ಏಳು ವಿಕೆಟ್‌ಗಳು ಇದುವರೆಗಿನ ಅತಿ ಹೆಚ್ಚು. ಸತತ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆರ್‌ಸಿಬಿ ಮಾಜಿ ಬೌಲರ್‌, ಪರ್ಪಲ್‌ ಕ್ಯಾಪ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
  • ಪಂಜಾಬ್‌ ತಂಡವು ಈ ಬಾರಿ ಭರ್ಜರಿ ಫಾರ್ಮ್‌ನಲ್ಲಿದೆ. 3 ಪಂದ್ಯಗಳನ್ನು ಗೆದ್ದು ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅತ್ತ ಎಸ್‌ಆರ್‌ಎಚ್‌ ತಂಡ ಹಲ್ಲಿಲ್ಲದ ಹುಲಿಯಂತಿದೆ. ಬಲಿಷ್ಠ ತಂಡವೇ ಇದ್ದರೂ ಗೆಲುವು ಒಲಿಯುತ್ತಿಲ್ಲ. ತಂಡವು ಮೇಲಿಂದ ಮೇಲೆ ನಾಲ್ಕು ಪಂದ್ಯಗಳಲ್ಲಿ ಸೋತಿದೆ.
  • ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಸನ್‌ರೈಸರ್ಸ್‌ ತಂಡದ ಶಕ್ತಿ. ಆದರೆ ಈ ಬಾರಿ ಅಗ್ರಕ್ರಮಾಂಕ ಸಿಡಿಯುತ್ತಿಲ್ಲ ಟ್ರಾವಿಸ್‌ ಹೆಡ್‌ ಕೆಲವು ಪಂದ್ಯ ಬಿಟ್ಟರೆ ಆಮೇಲೆ ಅಬ್ಬರಿಸಿಲ್ಲ. ಅಭಿಷೇಕ್‌ ಶರ್ಮಾ ಎಲ್ಲಾ ಪಂದ್ಯಗಳಲ್ಲೂ ವಿಫಲವಾಗಿದ್ದಾರೆ. ಆರಂಭಿಕ ಪಂದ್ಯದಲ್ಲಿ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌, ಆ ನಂತರ ಬ್ಯಾಟಿಂಗ್‌ ಮರೆತಿದ್ದಾರೆ. ಹೀಗಾಗಿ ತಂಡದ ಬ್ಯಾಟಿಂಗ್‌ ಫಾರ್ಮ್‌ಗೆ ಮರಳಬೇಕಿದೆ.
  • ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಈವರೆಗೆ 23 ಪಂದ್ಯಗಳನ್ನು ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಹೈದರಾಬಾದ್ 16 ಪಂದ್ಯಗಳಲ್ಲಿ ಗೆದ್ದರೆ, ಪಂಜಾಬ್‌ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
  • ಪಂಜಾಬ್‌ ತಂಡಕ್ಕೆ ಬ್ಯಾಟಿಂಗ್‌ ದೊಡ್ಡ ಶಕ್ತಿ. ಒಬ್ಬರಲ್ಲದಿದ್ದರೆ ಇನ್ನೊಬ್ಬರು ಅಬ್ಬರಿಸಿ ಆಸರೆಯಾಗುತ್ತಿದ್ದಾರೆ. ವಿಕೆಟ್‌ಗಳು ಪತನವಾಗುತ್ತಿದ್ದರೂ, ರನ್‌ ಹರಿವು ನಿಲ್ಲುತ್ತಿಲ್ಲ. ಅನ್‌ಕ್ಯಾಪ್ಡ್‌ ಆರಂಭಿಕ ಆಟಗಾರ ಪ್ರಿಯಾಂಶ್‌ ಆರ್ಯ ಕೊನೆಯ ಪಂದ್ಯದಲ್ಲಿ ಅಬ್ಬರಿಸಿ ಶತಕ ಸಿಡಿಸಿದ್ದರು. ಸಿಎಸ್‌ಕೆ ತಂಡದ ವಿರುದ್ಧ ಒಂದೆಡೆ ವಿಕೆಟ್‌ಗಳು ಪತನವಾದರೂ, ಮತ್ತೊಂದೆಡೆ ರನ್‌ ಬರುತ್ತಲೇ ಇತ್ತು. ಇದಕ್ಕೆ ಸರಿಯಾಗಿ ಎಸ್‌ಆರ್‌ಎಚ್‌ ಗೇಮ್‌ಪ್ಲಾನ್‌ ರೂಪಿಸಬೇಕಿದೆ.
  • ಪಂಜಾಬ್‌ ನಾಯಕ ಶ್ರೇಯಸ್ ಅಯ್ಯರ್ ಚಾಣಾಕ್ಷ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡುತ್ತಿದ್ದಾರೆ. ನೆಹಾಲ್ ವಧೇರಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಫಾರ್ಮ್‌ನಲ್ಲಿದ್ದಾರೆ. ಯುವ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಪಂದ್ಯದ ಸೆಂಟರ್‌ ಆಫ್‌ ಅಟ್ರಾಕ್ಷನ್.

ಇದನ್ನೂ ಓದಿ | ಸಿಎಸ್‌ಕೆ ನಾಯಕತ್ವಕ್ಕೆ ಯುವ ವಿಕೆಟ್ ಕೀಪರ್ ವಾಪಸ್; ಯೆಲ್ಲೋ ಆರ್ಮಿಯಿಂದ ಹೊರಬಿದ್ದ ಬಳಿಕ ರುತುರಾಜ್ ಮೊದಲ ಮಾತು

ಜಯರಾಜ್‌ ಅಮಿನ್: ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

Whats_app_banner

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!