Latest Kannada Nation & World
ಚಾರು ಕೆನ್ನೆಗೆ ಹೊಡೆದು ತಾನೇ ಅಳುತ್ತಿದ್ದಾಳೆ ಜಾನಕಿ; ರಾಮಾಚಾರಿ ಮುಂದೆ ಸತ್ಯ ಬಚ್ಚಿಟ್ಟ ಪತ್ನಿ

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಅಳುತ್ತಾ ಕುಳಿತಿದ್ದಾಳೆ. ಆದರೆ ರಾಮಾಚಾರಿ ಕೋಣೆಗೆ ಬಂದ ತಕ್ಷಣ ಅವನಿಗೆ ಗೊತ್ತಾಗದ ಹಾಗೆ ಕಣ್ಣೊರೆಸಿಕೊಳ್ಳುತ್ತಾಳೆ. ಆದರೂ ರಾಮಾಚಾರಿಗೆ ಅನುಮಾನ ಬರುತ್ತದೆ. “ಯಾಕೆ ಕಣ್ಣೆಲ್ಲ ಕೆಂಪಾಗಿದೆ? ಅಳ್ತಾ ಇದ್ದೀರಾ?” ಎಂದು ಪ್ರಶ್ನೆ ಮಾಡುತ್ತಾನೆ. ಆಗ ಚಾರು ಮತ್ತೆ ಸುಳ್ಳು ಹೇಳುತ್ತಾಳೆ. “ಇಲ್ಲ ರಾಮಾಚಾರಿ, ನಾನು ಏನೋ ಕೆಲ್ಸ್ ಮಾಡ್ತಾ ಇದ್ದೆ. ಆಗ ಕಣ್ಣಲ್ಲಿ ಧೂಳು ಬಿತ್ತು, ಹಾಗಾಗಿ ಸ್ವಲ್ಪ ಕಣ್ಣುರಿ” ಎಂದು ಹೇಳುತ್ತಾಳೆ. ಆಗ ರಾಮಾಚಾರಿ, ಚಾರು ಹೇಳಿದ ಮಾತನ್ನೇ ನಂಬಿಕೊಂಡು ಸುಮ್ಮನಾಗುತ್ತಾನೆ. ಆದರೂ, ಏನೇ ಕಷ್ಟ ಬಂದ್ರೂ ನನ್ನತ್ರ ಹೇಳಿಕೊಳ್ಳಿ ಎಂಬ ಮಾತೊಂದನ್ನು ಹೇಳಿರುತ್ತಾನೆ. ಚಾರು ತನ್ನ ಕೆನ್ನೆಗೆ ಅತ್ತೆ ಹೊಡೆದಿದ್ದಾರೆ ಎಂಬ ಮಾತನ್ನು ಅವನ ಮುಂದೆ ಹೇಳಲಾಗದೆ ಸುಮ್ಮನಾಗುತ್ತಾಳೆ.