Latest Kannada Nation & World
ನಿರ್ದೇಶಕ ಶಂಕರ್ ವಿರುದ್ಧ ಕಥೆ ಕದ್ದ ಆರೋಪ; ಚೆನ್ನೈನಲ್ಲಿನ 3 ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿದ ED

ಜಾರಿ ನಿರ್ದೇಶನಾಲಯ ಹೇಳಿದ್ದೇನು?
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡ ಜಾರಿ ನಿರ್ದೇಶನಾಲಯ, “ಲಭ್ಯವಿರುವ ಪುರಾವೆಗಳು ಮತ್ತು ದಾಖಲೆಗಳ ಆಧಾರದ ಮೇಲೆ, ಎಸ್. ಶಂಕರ್ ಕೃತಿಸ್ವಾಮ್ಯ ಕಾಯ್ದೆ, 1957ರ ಸೆಕ್ಷನ್ 63 ಅನ್ನು ಉಲ್ಲಂಘಿಸಿದ್ದಾರೆ ಎಂದು ನಿರ್ಧರಿಸಲಾಗಿದೆ. ಪಿಎಂಎಲ್‌ಎ, 2002ರ ಅಡಿಯಲ್ಲಿ ನಿಗದಿತ ಅಪರಾಧ ಎಂದು ವರ್ಗೀಕರಿಸಲಾದ ಉಲ್ಲಂಘನೆಯಾಗಿದೆ. ಎಸ್. ಶಂಕರ್ ಅವರ ಹೆಸರಿನಲ್ಲಿ ನೋಂದಾಯಿಸಲಾದ ಒಟ್ಟು ರೂ.10.11 ಕೋಟಿ ಮೌಲ್ಯದ 3 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.” ಎಂದು ಇಡಿ ತಿಳಿಸಿದೆ.