Astrology
ಪರಮಾತ್ಮನು ಅತ್ಯಂತ ಕರುಣಾಮಯಿ, ಅದಕ್ಕೆ ಅರ್ಜುನನೊಂದಿಗಿನ ಅವನ ಬಾಂಧವ್ಯವೇ ಸಾಕ್ಷಿ; ಗೀತೆಯ ಅರ್ಥ ತಿಳಿಯಿರಿ

ಅಧ್ಯಾಯ – 11: ವಿಶ್ವರೂಪ – ಶ್ಲೋಕ – 41
ಸಖೇತಿ ಮತ್ವಾ ಪ್ರಸಭಂ ಯದುಕ್ತಮ್
ಹೇ ಕೃಷ್ಣ ಹೇ ಯಾದವ ಹೇ ಸಖೇತಿ |
ಅಜಾನತಾ ಮಹಿಮಾನಂ ತವೇದಮ್
ಮಯಾ ಪ್ರಮಾದಾತ್ ಪ್ರಣಯೇನ ವಾಪಿ || 41 ||
ಅಧ್ಯಾಯ – 11: ವಿಶ್ವರೂಪ – ಶ್ಲೋಕ – 42
ಯಚ್ಚಾವಹಾಸಾರ್ಥಮಸತ್ಕೃತೋsಸಿ
ವಿಹಾರಶಯ್ಯಾಸನಭೋಜನೇಷು |
ಏಕೋsಥವಾಪ್ಯಚ್ಯುತ ತತ್ಸಮಕ್ಷಮ್
ತತ್ ಕ್ಷಾಮಯೇ ತ್ವಾಮಹಮಪ್ರಮೇಯಮ್ || 42 ||
ಅರ್ಥ: ನಿನ್ನ ಮಹಿಮೆಗಳನ್ನು ತಿಳಿಯದೆ, ನೀನು ನನ್ನ ಸಖನೆಂದು ಭಾವಿಸಿ, ಯೋಚನೆ ಮಾಡದೆ ನಿನ್ನನ್ನು ‘ಕೃಷ್ಣಾ’, ‘ಯಾದವ’, ‘ಓ ಗೆಳೆಯಾ’ ಎಂದೆಲ್ಲ ಕರೆದಿದ್ದೇನೆ. ಪ್ರಮಾದದಿಂದಾಗಲಿ ಪ್ರೀತಿಯಿಂದಾಗಲಿ ನಾನು ಮಾಡಿರುವ ಅಪರಾಧಗಳನ್ನು ಕ್ಷಮಿಸು. ವಿಹಾರದಲ್ಲಿ, ಒಂದೇ ಹಾಸಿಗೆಯಲ್ಲಿ ಮಲಗಿದ್ದಾಗ, ನಾವಿಬ್ಬರೇ ಇದ್ದಾಗ, ಸ್ನೇಹಿತರ ಮುಂದೆ ನಾನು ನಿನ್ನನ್ನು ಅನೇಕ ಬಾರಿ ಅಪಹಾಸ್ಯ ಮಾಡಿದ್ದೇನೆ. ಅಚ್ಯುತನೇ, ಇವಕ್ಕೆಲ್ಲ ನಾನು ನಿನ್ನ ಕ್ಷಮೆ ಬೇಡುತ್ತೇನೆ.