Latest Kannada Nation & World
ಪಿಎಂ-ಕಿಸಾನ್ 18ನೇ ಕಂತು ಇಂದು ಬಿಡುಗಡೆ; ಅರ್ಹತೆ ಮತ್ತು ಇ-ಕೆವೈಸಿ ಪ್ರಕ್ರಿಯೆ ಪರಿಶೀಲಿಸಿ, ಇಲ್ಲಿದೆ ವಿವರ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 18ನೇ ಕಂತಿನ ಹಣವನ್ನು ಇಂದು (ಅಕ್ಟೋಬರ್ 05, 2024) ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ದೇಶಾದ್ಯಂತ 9.5 ಕೋಟಿಗೂ ಹೆಚ್ಚು ರೈತರಿಗೆ 2,000 ರೂಪಾಯಿಗಳನ್ನು ವರ್ಗಾಯಿಸಲು 20,000 ಕೋಟಿ ರೂಪಾಯಿ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು ಬಂದ 17ನೇ ಕಂತು ಜೂನ್ 18 ರಂದು ವಿತರಿಸಲಾಯಿತು. ಸುಮಾರು 9.25 ಕೋಟಿ ರೈತರಿಗೆ 2,000 ರೂಪಾಯಿಗಳ ಮೊತ್ತ ಜಮೆಯಾಗಿತ್ತು. ಈ ಯೋಜನೆಯಡಿಯಲ್ಲಿ ವರ್ಷಕ್ಕೆ 3 ಕಂತುಗಳಂತೆ ರೈತರು ಒಟ್ಟು 6 ಸಾವಿರ ಪಡೆಯುತ್ತಾರೆ. ಕೇವಲ ಎರಡು ಹೆಕ್ಟೇರ್ ವರೆಗೆ ಭೂಮಿಯನ್ನು ಹೊಂದಿರುವವರು ಅರ್ಹ ರೈತರು.