Latest Kannada Nation & World
ಪಿಎಸ್ಎಲ್ ಬಿಟ್ಟು ಐಪಿಎಲ್ ಆಡಿದ್ದಕ್ಕೆ ಪಿಸಿಬಿ ಕೆಂಡ; ಕಾರ್ಬಿನ್ ಬಾಷ್‌ಗೆ ನಿಷೇದ ಶಿಕ್ಷೆ ವಿಧಿಸಿದ ಪಾಕಿಸ್ತಾನ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಸಲುವಾಗಿ ಪಾಕಿಸ್ತಾನ ಸೂಪರ್ ಲೀಗ್ (PSL)ನಿಂದ ಹಿಂದೆ ಸರಿದ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕಾರ್ಬಿನ್ ಬಾಷ್ ಅವರಿಗೆ ಪಿಎಸ್‌ಎಲ್‌ನಿಂದ ಒಂದು ವರ್ಷ ನಿಷೇಧ ಹೇರಲಾಗಿದೆ. ಪಿಎಸ್ಎಲ್ ಫ್ರಾಂಚೈಸಿ ಪೇಶಾವರ್ ಝಲ್ಮಿ ತಂಡದೊಂದಿಗಿನ ಒಪ್ಪಂದದ ಬಾಧ್ಯತೆಗಳನ್ನು ಬಾಷ್ ಉಲ್ಲಂಘಿಸಿದ್ದಾರೆ ಎಂದು ಪಿಸಿಬಿ ಆರೋಪಿಸಿದೆ.