Latest Kannada Nation & World
ವೈಡ್ಗಳ ಮೇಲೆ ವೈಡ್; ವಿರಾಟ್ ಕೊಹ್ಲಿ ಶತಕ ತಪ್ಪಿಸಲು ನರಿ ಬುದ್ದಿ ತೋರಿಸಿತೇ ಪಾಕಿಸ್ತಾನ, ನೆಟ್ಟಿಗರು ಆಕ್ರೋಶ

ಪಾಕಿಸ್ತಾನ ವಿರುದ್ಧ ಗೆಲ್ಲಲು 2 ರನ್ ಹಾಗೂ ಶತಕಕ್ಕೆ 4 ರನ್ ಬೇಕಿದ್ದಾಗ ಕೊಹ್ಲಿ ಭರ್ಜರಿ ಬೌಂಡರಿ ಸಿಡಿಸಿ 51ನೇ ಶತಕ ಪೂರೈಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, 49.2 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 241 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡ, 45 ಎಸೆತಗಳನ್ನು ಬಾಕಿ ಉಳಿಸಿ 4 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತು. ವಿರಾಟ್ 111 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 100 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 56, ಶುಭ್ಮನ್ ಗಿಲ್ 46 ರನ್ ಗಳಿಸಿ ಅಭೂತಪೂರ್ವ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೊಹ್ಲಿ ಅವರ ಅದ್ಭುತ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂತು. ಇದೇ ವೇಳೆ ಪಾಕ್ ಅನ್ನು ನೆಟ್ಟಿಗರು ಕುತಂತ್ರಿಗಳು ಎಂದು ಜರಿದಿದ್ದಾರೆ.