Latest Kannada Nation & World
ಪ್ರಾಣಿ ಪ್ರಿಯೆ ಗೌತಮಿ ಜಾಧವ್, ಇಷ್ಟದ ನಟಿ ಮಿನುಗುತಾರೆ ಕಲ್ಪನಾ; ಹರಸಿ ಆರತಿ ಮಾಡಿ ಬಿಗ್‌ಬಾಸ್ 11ರ ಸ್ಪರ್ಧಿಯಾಗಿ ಬರ್ತಿದ್ದಾಳೆ ನಮ್ಮ ಸತ್ಯ

ಪತಿ ಅಭಿಷೇಕ್ ಕಾಸರಗೋಡು ಚಿತ್ರರಂಗದಲ್ಲಿ ಸಿನಿಮಾಟೋಗ್ರಾಫರ್
ಕಿನಾರೆ ಚಿತ್ರದಲ್ಲಿ ಗೌತಮಿ ಜಾಧವ್ ನಟಿಸುವಾಗ ಅಭಿಷೇಕ್ ಜೊತೆ ಲವ್ ಆಗಿದೆ. ನಂತರ ಮನೆಯವರಿಗೆ ತಮ್ಮ ಪ್ರೀತಿ ವಿಚಾರ ತಿಳಿಸಿದ ಈ ಜೋಡಿ 2019 ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ನಂತರ ಅಭಿಷೇಕ್ ತಮ್ಮ ಪತ್ನಿಗಾಗಿ ಪಪ್ಪೆಟ್ಸ್ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ಅಭಿಷೇಕ್ ಕಾಸರಗೋಡು, ಆಪರೇಷನ್ ಅಲಮೇಲಮ್ಮ, ಅನಂತು ವರ್ಸಸ್ ನುಸ್ರತ್, ಮಾಯಾ ಬಜಾರ್, ಕೃಷ್ಣ ಟಾಕೀಸ್, ಸಿನಿಮಾಗಳಿಗೆ ಸಿನಿಮಾಟ್ರೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚೆಗೆ ತೆರೆ ಕಂಡ ನಟ ವಿನಯ್ ರಾಜ್‌ಕುಮಾರ್ ಅಭಿನಯದ ಪೆಪೆ ಸಿನಿಮಾಗೆ ಕೂಡಾ ಇವರು ಛಾಯಾಗ್ರಹಣ ಮಾಡಿದ್ದಾರೆ.