Latest Kannada Nation & World
ಜಾಹ್ನವಿಯನ್ನು ನೋಡಲು ಮನೆಗೆ ಬಂದ ಲಕ್ಷ್ಮೀ ಮತ್ತು ಶ್ರೀನಿವಾಸ್; ಉತ್ತರಿಸಲು ತಡಕಾಡಿದ ಜಯಂತ್: ಲಕ್ಷ್ಮೀ ನಿವಾಸ ಧಾರಾವಾಹಿ

ಜಾಹ್ನವಿ ಮನೆಯಲ್ಲಿಲ್ಲ ಎಂದು ತಿಳಿದು ಶಾಕ್
ಲಕ್ಷ್ಮೀ ಮತ್ತು ಶ್ರೀನಿವಾಸ್, ವೆಂಕಿ ಮತ್ತು ಚೆಲ್ವಿಯನ್ನು ಕರೆದುಕೊಂಡು ಜಾಹ್ನವಿ ಮನೆಗೆ ಹೋಗುತ್ತಾಳೆ. ಜಯಂತ್ ಅವರನ್ನು ನೋಡಿ ಶಾಕ್‌ಗೆ ಒಳಗಾಗುತ್ತಾನೆ. ಆದರೂ ಅದನ್ನು ಅವರೆದುರು ತೋರಿಸಿಕೊಳ್ಳುವುದಿಲ್ಲ. ಜಾಹ್ನವಿಗೆ ಸ್ಕ್ಯಾನಿಂಗ್ ಇದೆ, ಹೀಗಾಗಿ ಆಸ್ಪತ್ರೆಯಲ್ಲಿ ಇದ್ದಾಳೆ, ಬರುವಾಗ ಸ್ವಲ್ಪ ತಡವಾಗುತ್ತದೆ ಎಂದು ಹೇಳುತ್ತಾನೆ. ಜಯಂತ್ ವರ್ತನೆ ಲಕ್ಷ್ಮೀ ಮತ್ತು ಶ್ರೀನಿವಾಸ್‌ಗೆ ಸಂಶಯ ತರಿಸಿದರೂ, ಅಳಿಯಂದಿರು ಸುಳ್ಳು ಹೇಳಲಿಕ್ಕಿಲ್ಲ, ಜಾಹ್ನವಿ ಆರಾಮವಾಗಿ ಇರಬಹುದು, ಇನ್ನೇನು ಮನೆಗೆ ಬರಬಹುದು ಎಂದು ಹೇಳಿ, ಅಜ್ಜಿಯನ್ನು ನೋಡಲು ಮಹಡಿಗೆ ಹೋಗುತ್ತಾರೆ. ಅಲ್ಲಿಗೆ ಗುರುವಾರದ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.