ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅರ್ಧಶತಕ; ತವರಿನ ಹೊರಗೆ ಆರ್ಸಿಬಿಗೆ ಸತತ 4ನೇ ಗೆಲುವು, ರಾಜಸ್ಥಾನ್ಗೆ ನಾಲ್ಕನೇ ಸೋಲು

ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅವರ ಅರ್ಧಶತಕಗಳ ಸಹಾಯದಿಂದ ತವರಿನ ಹೊರಗೆ ಆರ್ಸಿಬಿಗೆ ಸತತ 4ನೇ ಗೆಲುವು ದಾಖಲಿಸಿದೆ. ಆದರೆ ರಾಜಸ್ಥಾನ್ಗೆ ನಾಲ್ಕನೇ ಸೋಲು ಕಂಡಿದೆ.
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅರ್ಧಶತಕ; ತವರಿನ ಹೊರಗೆ ಆರ್ಸಿಬಿಗೆ ಸತತ 4ನೇ ಗೆಲುವು, ರಾಜಸ್ಥಾನ್ಗೆ ನಾಲ್ಕನೇ ಸೋಲು (PTI)
ತವರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಸತತ ಎರಡನೇ ಸೋಲಿಗೆ ಶರಣಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನ ಹೊರಗೆ ನಡೆದ ಸತತ 4ನೇ ಪಂದ್ಯದಲ್ಲಿ ಗೆದ್ದು ಬೀಗಿದೆ. ಫಿಲ್ ಸಾಲ್ಟ್ ಅವರ (65) ಬಿರುಸಿನ ಅರ್ಧಶತಕದ ನೆರವಿನಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ 9 ವಿಕೆಟ್ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಮತ್ತೊಂದೆಡೆ ರಾಜಸ್ಥಾನ್ಗೆ ಒಟ್ಟಾರೆ 4ನೇ ಸೋಲು ಇದಾಗಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲೇ ಮುಂದುವರೆದಿದೆ.
ಜೈಪುರದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ನ 28ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಆರ್, ಯಶಸ್ವಿ ಜೈಸ್ವಾಲ್ ಅವರ (75) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ, 17.3 ಓವರ್ಗಳಲ್ಲೇ 1 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ (62*) ಅರ್ಧಶತಕ ಸಿಡಿಸಿದರು. ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್ ಆಗಿ 40 ರನ್ ಗಳಿಸಿದರು.