Latest Kannada Nation & World
ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಜತೆಗೆ ನಟಿ ಐಶ್ವರ್ಯಾ ಸಿಂಧೋಗಿ ಎಂಟ್ರಿ-bigg boss kannada season 11 contestants list chaitra kundapura aishwarya shindogi enters bbk 11 mnk ,ಮನರಂಜನೆ ಸುದ್ದಿ

ಚೈತ್ರಾ ಕುಂದಾಪುರ.. ಈ ಹೆಸರು ಕರಾವಳಿ ಭಾಗದವರಿಗೆ ಚೆನ್ನಾಗಿಯೇ ಗೊತ್ತು. ತಮ್ಮ ಖಡಕ್ ಮಾತುಗಳಿಂದಲೇ, ಹಿಂದುತ್ವದ ಹೆಸರಿನಲ್ಲಿ ಭಾಷಣ ಮಾಡಿ, ತಮ್ಮದೇ ಆದ ಅಪಾರ ಹಿಂಬಾಲಕರನ್ನು ಹೊಂದಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಚೈತ್ರಾ, ತೆಕ್ಕಟ್ಟೆಯಲ್ಲಿ ಪಿಯುಸಿ ಮುಗಿಸಿ, ಕೊಣಾಜೆಯಲ್ಲಿ ಡಿಗ್ರಿ ಮುಗಿಸಿದ್ದಾರೆ. ಅದಾದ ಬಳಿಕ ಬೆಂಗಳೂರಿನಲ್ಲಿ ಒಂದಷ್ಟು ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ್ದರು. ಅದಾದ ಬಳಿಕ ಉಡುಪಿಯ ಸ್ಪಂದನ ಟಿವಿಯಲ್ಲಿ ನಿರೂಪಕಿಯಾಗಿ, ಉದಯವಾಣಿ ಪತ್ರಿಕೆಯಲ್ಲಿಯೂ ಕೆಲಸ ಮಾಡಿದ್ದಾರೆ. ಈಗ ಇದೇ ಮಾತುಗಾರ್ತಿ ಬಿಗ್‌ಬಾಸ್‌ಗೆ ಎಂಟ್ರಿಯಾಗಿದ್ದಾರೆ.