Latest Kannada Nation & World
ಬರಿ ಅಶ್ಲೀಲ, ಡಬಲ್ ಮೀನಿಂಗ್; ಬಿಗ್ ಬಾಸ್ ಶೋ ನಿಷೇಧಕ್ಕೆ ಒತ್ತಾಯ, ಕನ್ನಡಿಗರಿಗೆ ಹೆಚ್ಚಿದ ಆತಂಕ

ಕೂಟಮೈಪ್ಪು ಅಧ್ಯಕ್ಷ ತಮಿಳರಸನ್ ಅವರು, 100 ದಿನಗಳ ಕಾಲ ಸೆರೆಯಲ್ಲಿರುವ ಪುರುಷ ಮತ್ತು ಮಹಿಳಾ ಕಲಾವಿದರ ದೈನಂದಿನ ಚಟುವಟಿಕೆಗಳು ಮತ್ತು ಖಾಸಗಿ ವ್ಯವಹಾರಗಳು ರಹಸ್ಯ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ದೃಶ್ಯಗಳನ್ನು ಡಬಲ್ ಮೀನಿಂಗ್ಗಳೊಂದಿಗೆ ಪ್ರಸಾರ ಮಾಡಲಾಗುತ್ತಿದೆ. ಕುಟುಂಬ ಸದಸ್ಯರೊಂದಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳೊಂದಿಗೆ ವೀಕ್ಷಿಸಲು ಆಗುವುದಿಲ್ಲ. ಇದು ಜನರನ್ನು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುತ್ತದೆ ಎಂದು ಕಿಡಿಕಾರಿದ್ದಾರೆ. ಈ ಸುದ್ದಿ ಕೇಳಿದ ತಕ್ಷಣ ಕನ್ನಡದಲ್ಲೂ ಬ್ಯಾನ್ ಆಗುತ್ತಾ ಎಂಬ ಆತಂಕದಲ್ಲಿದ್ದಾರೆ ಫ್ಯಾನ್ಸ್. ಆದರೆ, ಮನವಿ ಸಲ್ಲಿಸುವುದು ತಮಿಳಿನಲ್ಲಿ ಬ್ಯಾನ್ ಮಾಡುವಂತೆ. ಹಾಗಾಗಿ ಕನ್ನಡಿಗರು ಯಾವುದೇ ಆತಂಕ ಪಡುವಂತಿಲ್ಲ.