Latest Kannada Nation & World
ಬರೋಬ್ಬರಿ 24 ಲಕ್ಷ ಶಿಶುಗಳನ್ನು ಉಳಿಸಿದ ಆಸ್ಟ್ರೇಲಿಯಾದ ಪ್ಲಾಸ್ಮಾ ದಾನಿ ಜೇಮ್ಸ್ ಹ್ಯಾರಿಸನ್ ನಿಧನ

ಅಪರೂಪದ ಪ್ರತಿಕಾಯ
ಹ್ಯಾರಿಸನ್ ಅವರ ಪ್ಲಾಸ್ಮಾವು ಆಂಟಿ-ಡಿ ಎಂಬ ಅಪರೂಪದ ಮತ್ತು ಅಮೂಲ್ಯವಾದ ಪ್ರತಿಕಾಯವನ್ನು ಹೊಂದಿತ್ತು. ಈ ವಿಷಯ 1960ರ ದಶಕದ ಮಧ್ಯಭಾಗದಲ್ಲಿ ಗೊತ್ತಾಯ್ತು. ಭ್ರೂಣ ಮತ್ತು ನವಜಾತ ಶಿಶುವಿನ ಹೆಮೋಲಿಟಿಕ್ ಕಾಯಿಲೆ (HDFN) ತಡೆಗಟ್ಟಲು ಇದನ್ನು ಔಷಧಿಗಳಲ್ಲಿ ಬಳಸಲಾಗುತ್ತದೆ. ರೀಸಸ್ ಎಂದೂ ಕರೆಯಲ್ಪಡುವ ಕಾಯಿಲೆಯು, ಸಾಮಾನ್ಯವಾಗಿ ಗರ್ಭಿಣಿಯ ರಕ್ತವು ಅವರಿಗೆ ಹುಟ್ಟಲಿರುವ ಮಗುವಿನ ರಕ್ತದೊಂದಿಗೆ ಹೊಂದಿಕೆಯಾಗದಿದ್ದಾಗ ಸಂಭವಿಸುವ ಸಂಭಾವ್ಯ ಮಾರಕ ಕಾಯಿಲೆಯಾಗಿದೆ. ಈ ಕಾಯಿಲೆಯ ಪ್ರಭಾವ ಏನೆಂದರೆ, ಇದು ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯು ಮೇಲೆ ದಾಳಿ ಮಾಡಲು ಪ್ರೇರೇಪಿಸುತ್ತದೆ.