Latest Kannada Nation & World
ಬರೋಬ್ಬರಿ 27 ಕೋಟಿ ಕೊಟ್ಟು ರಿಷಬ್ ಪಂತ್ ಖರೀದಿಸಿದ ಲಕ್ನೋ ಸೂಪರ್ ಜೈಂಟ್ಸ್; ಐಪಿಎಲ್‌ನ ದುಬಾರಿ ಬಿಡ್

ಐಪಿಎಲ್ 2025ರ ಆವೃತ್ತಿಯ ಮೆಗಾ ಹರಾಜಿನಲ್ಲಿ, ರಿಷಬ್ ಪಂತ್ ಭಾರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಹರಾಜಿಗೂ ಮುನ್ನವೇ ದೊಡ್ಡ ಮೊತ್ತ ಪಡೆಯುವ ನಿರೀಕ್ಷೆ ಮೂಡಿಸಿದ್ದ ವಿಕೆಟ್ ಕೀಪರ್, ಬರೋಬ್ಬರಿ 27 ಕೋಟಿ ರೂ ಮೊತ್ತಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ. ಮೂಲ ಬೆಲೆ 2 ಕೋಟಿ ರೂಪಾಯಿಗೆ ರಿಷಬ್ ಪಂತ್ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪೈಪೋಟಿಗಿಳಿದವು. ಕ್ಷಣ ಮಾತ್ರದಲ್ಲೇ ಬಿಡ್ 10 ಕೋಟಿಗೇರಿತು. ಈ ವೇಳೆ ಆರ್‌ಸಿಬಿ ಬಿಡ್ಡಿಂಗ್ ತುಸು ನಿಧಾನಗೊಳಿಸಿತು. ಈ ವೇಳೆ ಸನ್‌ರೈಸರ್ಸ್ ಹೈದರಾಬಾದ್ ಬಿಡ್ ವಾರ್‌ಗೆ ಇಳಿಯಿತು. ಮಾಲಕಿ ಕಾವ್ಯಾ ಮಾರನ್ ತಾನು ಪಂತ್ ಬಿಟ್ಟುಕೊಡಲ್ಲ ಎಂಬಂತೆ ಬಿಡ್ಡಿಂಗ್ ವಾರ್‌ಗೆ ಧುಮುಕಿದರು. ಬರೋಬ್ಬರಿ 20 ಕೋಟಿ ಬಿಡ್ ಮಾಡಿದರು.