Astrology
ಬಸವನಗುಡಿ ಕಳ್ಳೆ ಕಾಯಿ ಪರಿಷೆ ಯಾವಾಗ? ಆಚರಣೆಯ ಮಹತ್ವ, ಐತಿಹ್ಯದ ವಿವರ ಇಲ್ಲಿದೆ ನೋಡಿ

ಸಂಭ್ರಮದ ಕಡಲೆಕಾಯಿ ಪರಿಷೆ
ಕೃಷ್ಣದೇವರಾಯನ ಕಾಲದಲ್ಲಿ ಬೀದಿಬದಿಯಲ್ಲಿ ಚಿನ್ನ ಮಾರಾಟ ಮಾಡುತ್ತಿದ್ದರಂತೆ. ಆದರೆ, ಕಡಲೆಕಾಯಿ ಪರಿಷೆ ಸಮಯದಲ್ಲಿ ಬಸವನಗುಡಿ ರಾಮಕೃಷ್ಣ ಆಶ್ರಮದ ಸುತ್ತಮುತ್ತ ರಸ್ತೆಯ ಸುತ್ತಮುತ್ತ ಕಡಲೆಕಾಯಿಗಳದ್ದೇ ಜಾತ್ರೆ. ಕಡಲೆಕಾಯಿ ಮಾತ್ರವಲ್ಲದೆ ತಿಂಡಿತಿನಿಸುಗಳು, ಆಟಿಕೆಗಳು, ಜನಜಂಗುಳಿಯಿಂದ ಜಾತ್ರೆಯ ರಂಗು ಮೂಡುತ್ತದೆ. ಜನರು ಕಡಲೆಕಾಯಿಯನ್ನು ಸವಿಯುತ್ತ ಜಾತ್ರೆಯಲ್ಲಿ ಸುತ್ತಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕಿವಿ ಹರಿದುಹೋಗುವಂತೆ ಪೀಪೀ ಊದುವವರ ಉಪಟಳವೂ ಜಾತ್ರೆಯನ್ನು ತುಸು ಅಸಹನೀಯವಾಗಿಸಿದೆ ಎಂದು ಜಾತ್ರೆಗೆ ಬಂದವರು ದೂರುತ್ತಿದ್ದಾರೆ.