Latest Kannada Nation & World
ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡಂತೆ ಸದ್ದು ಮಾಡದ ಕಂಗುವಾ; ವೇಟ್ಟೈಯನ್‌ಗೂ ಕಡಿಮೆ ಕಲೆಕ್ಷನ್ ಮಾಡಿದ ಸೂರ್ಯ ಸಿನಿಮಾ

100 ಕೋಟಿ ರೂ.ಗೆ ಡಿಜಿಟಲ್ ರೈಟ್ಸ್ ಮಾರಾಟ
ಕಂಗುವಾ ಚಿತ್ರವನ್ನು ಸ್ಟುಡಿಯೋ ಗ್ರೀನ್ ಹಾಗೂ ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಕೆಇ ಜ್ಞಾನವೇಲ್ ರಾಜ, ವಂಶಿ ಕೃಷ್ಣ ರೆಡ್ಡಿ ಹಾಗೂ ಪ್ರಮೋದ್ ಉಪ್ಪಾಲಪತಿ ಜೊತೆ ಸೇರಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಶಿವ, ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಹಾಡುಗಳಿಗೆ ತೆಲುಗಿನಲ್ಲಿ ಅನೇಕ ಹಿಟ್ ಹಾಡುಗಳನ್ನು ನೀಡಿರುವ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ , ಕರ್ನಾಟಕದಲ್ಲಿ ಕಂಗುವಾ ಚಿತ್ರವನ್ನು ಹಂಚಿಕೆ ಮಾಡಿದೆ. ಚಿತ್ರದಲ್ಲಿ ಸೂರ್ಯ ವಿರುದ್ಧ ಬಾಬಿ ಡಿಯೋಲ್ ನಟಿಸಿದ್ದಾರೆ. ಉಳಿದಂತೆ ದಿಶಾ ಪಟಾನಿ, ರವಿಕುಮಾರ್, ಯೋಗಿಬಾಬು, ಕೋವೈ ಸರಳ, ಬೋಸ್ ವೆಂಕಟ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಒಟಿಟಿ ರೈಟ್ಸ್ ಅಮೆಜಾನ್ ಪ್ರೈಮ್ ವಿಡಿಯೋಗೆ 100 ಕೋಟಿ ರೂ. ಸೇಲ್ ಆಗಿದ್ದು ಡಿಸೆಂಬರ್ 3ನೇ ವಾರ ಸ್ಟ್ರೀಮ್ ಆಗುವ ಸಾಧ್ಯತೆ ಇದೆ.