Astrology
ಮನೆಯಲ್ಲಿ ಪ್ರಾಣಿ, ಪಕ್ಷಿಗಳನ್ನು ಸಾಕುವ ಅಭ್ಯಾಸ ಇದ್ಯಾ, ಇದಕ್ಕೂ ವಾಸ್ತು ನಿಯಮಗಳಿವೆ; ಪ್ರಾಣಿಪ್ರೇಮಿಗಳು ತಿಳಿದಿರಬೇಕಾದ ವಿಚಾರವಿದು

ಮನೆಯಲ್ಲಿ ಪ್ರಾಣಿ, ಪಕ್ಷಿಗಳನ್ನು ಸಾಕುವುದು ಒಂಥರಾ ಖುಷಿ ನೀಡುತ್ತದೆ. ಮೊದಲೆಲ್ಲಾ ಹಳ್ಳಿಗಳಲ್ಲಿ ಪ್ರಾಣಿ, ಪಕ್ಷಿ ಸಾಕುತ್ತಿದ್ದರು. ಆದರೆ ಈಗ ಪಟ್ಟಣಗಳಲ್ಲೂ ಪ್ರಾಣಿ, ಪಕ್ಷಿಗಳನ್ನ ಸಾಕುತ್ತಾರೆ. ವಾಸ್ತುಶಾಸ್ತ್ರದ ಪ್ರಕಾರ ಕೆಲವು ಪ್ರಾಣಿ, ಪಕ್ಷಿಗಳನ್ನು ಮನೆಯಲ್ಲಿ ಸಾಕುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಅದರಂತೆ ಕೆಲವು ಪ್ರಾಣಿ, ಪಕ್ಷಿಗಳನ್ನು ಮನೆಯಲ್ಲಿ ಸಾಕುವುದರಿಂದ ಅಶುಭ ಘಟನೆಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ.