Latest Kannada Nation & World
ಛಾವಾ ಸಿನಿಮಾದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ನ್ಯಾಯ ಒದಗಿಸಿದ ರಶ್ಮಿಕಾ ಮಂದಣ್ಣ; ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ
ಭಾಷೆಯ ಬಳಕೆಯಿಂದ ಹಿಡಿದು, ರಾಜಮನೆತನಕ್ಕೆ ಸೂಕ್ತವಾದ ನಡವಳಿಕೆಯನ್ನು ಅಳವಡಿಸಿಕೊಳ್ಳುವವರೆಗೆ ರಶ್ಮಿಕಾ ಸೂಕ್ಷ್ಮವಾಗಿ ಅಭಿನಯಿಸಿದ್ದಾರೆ. ಒಂದು ಸಂದರ್ಶನದಲ್ಲಿ ರಶ್ಮಿಕಾ “ನಾವು ಈ ಬಗ್ಗೆ ಓದಿದ್ದೇವೆ. ಆದರೆ, ನಾವು ಅವರನ್ನು ಎಂದಿಗೂ ನೋಡಿಲ್ಲ. ಮಹಾರಾಣಿ ಹೇಗೆ ನಡೆದರು, ಮಾತನಾಡಿದರು ಅಥವಾ ಯಾವ ರೀತಿ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು? ಎನ್ನುವುದನ್ನು ನಾವು ಎಂದಿಗೂ ಕಣ್ಣಾರೆ ಕಂಡಿಲ್ಲ. ಇದೆಲ್ಲವನ್ನೂ ಲೆಕ್ಕಾಚಾರ ಮಾಡಿ ನಾನು ಅಭಿನಯಿಸಬೇಕು” ಎಂದು ಹೇಳಿದ್ದರು. ಆದರೆ ರಶ್ಮಿಕಾ ತಮ್ಮ ಅಭಿಮಾನಿಗಳ ಮನಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ರಶ್ಮಿಕಾ ಅಭಿನಯದ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.