Latest Kannada Nation & World
ಬಿಗ್‌ಬಾಸ್‌ನಲ್ಲಿ ಬಾಸ್ ದರ್ಶನ್ ನೆನಪಿಸಿಕೊಂಡ ರಜತ್; ಹೆಣ್ಮಕ್ಕಳ ಕೈಹಿಡದಂತೆ ಅಲ್ಲ, ಈ ಸೆಡೆಗಳನ್ನೆಲ್ಲ… ಬುಜ್ಜಿ ಮಾತಿಗಿಲ್ಲ ಕಡಿವಾಣ

ಈ ಸಮಯದಲ್ಲಿ ಕೋಪದಿಂದ ಬುಸುಗುಟ್ಟುತ್ತಿದ್ದ ಬುಜ್ಜಿಯನ್ನು ಕೂಲ್ ಮಾಡಲು ಸಾಕಷ್ಟು ಸ್ಪರ್ಧಿಗಳು ಪ್ರಯತ್ನಿಸಿದ್ದಾರೆ. “ಕೂಲ್ಡೌನ್, ಸ್ವಲ್ಪ ನೀರು ಕುಡಿರಿ” ಎಂದೆಲ್ಲ ಸಲಹೆ ನೀಡುತ್ತಾರೆ. ಇದಾದ ಬಳಿಕ ಜೈಲಿನ ಮೆಟ್ಟಿಲಿನಲ್ಲಿ ಕುಳಿತ ರಜತ್ “ಈ ಸೆಡೆಗಳನ್ನೆಲ್ಲ ಕಳುಹಿಸಿಬಿಟ್ಟೇ ನಾನು ಮನೆಗೆ ಹೋಗುವುದು. ನನಗೆ ಇರಿಟೇಟ್ ಆಗೋದು ಏನು ಗೊತ್ತಾ, ಅಖಾಡಕ್ಕೆ ಇಳಿಯಲು ತಾಖತ್ ಇಲ್ಲದೆ ಇರುವವರು, ನನ್ನ ಮಕ್ಕಳೆಲ್ಲ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ… ಬರಬೇಕಿತ್ತು ಅವತ್ತು, ಅಖಾಡದಲ್ಲಿ ಇಳಿದು ಮಾತನಾಡಬೇಕಿತ್ತು… ನಾನು ಬಂದ್ರೆ ಓಡೋ ಮಕ್ಕಳೆಲ್ಲ ಇವತ್ತು ನನ್ನ ನಾಮಿನೇಟ್ ಮಾಡ್ತಾರೆ. ಮಾಡ್ಲಿ ತೊಂದರೆಯಿಲ್ಲ. ತೋರಿಸ್ತಿನಿ, ಪಾಪ ಇಷ್ಟು ದಿನ ಹುಡುಗೀರ ಕೈ ಹಿಡಿಕೊಂಡು ಹೋಗ್ತಾ ಇದ್ರು (ಇದು ಕೂಡ ವಿವಾದಕ್ಕೆ ಎಡೆ ಮಾಡಿದ ಮಾತು). ನೆಕ್ಸ್ಟ್ ನನ್ನ ಕೈ ಕೊಡ್ತಿನಿ. ಅವಾಗ ಗೊತ್ತಾಗುತ್ತದೆ ಅಖಾಡದಲ್ಲಿ” ಎಂದು ರಜತ್ ಹೇಳುತ್ತಾರೆ.