Latest Kannada Nation & World
ಬಿಗ್ ಬಾಸ್ ಅಂಗಳಕ್ಕೆ ಹೊಸ ಆಟಗಾರರ ಎಂಟ್ರಿ; ಬೆಳ್‌ಬೆಳಗ್ಗೆ ನಿದ್ದೆಗಣ್ಣಲ್ಲೇ ಬೆಚ್ಚಿದ ಮನೆ ಮಂದಿ

ಬಿಗ್‌ಬಾಸ್ ಮನೆಯಿಂದ ಲಾಯರ್ ಜಗದೀಶ್ ಮತ್ತು ರಂಜಿತ್ ನೇರವಾಗಿ ಎಲಿಮಿನೇಟ್ ಆಗುತ್ತಿದ್ದಂತೆ, ಗಾಯಕ ಹನುಮಂತ ಲಮಾಣಿ ಬಿಗ್ ಬಾಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಆಗಮಿಸಿದ ಮೊದಲ ಸ್ಪರ್ಧಿಯಾಗಿದ್ದರು. ಈಗ 50 ದಿನದ ಬಳಿಕ, ಅಂಗಳಕ್ಕೆ ಹೊಸ ಆಟಗಾರರ ಎಂಟ್ರಿಯಾಗಿದೆ. ಶೋಭಾ ಶೆಟ್ಟಿ ಈಗಾಗಲೇ ತೆಲುಗು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿ ಗಮನಸೆಳೆದವರು. ಇತ್ತ ರಜತ್ ಸಹ ಇಂಥ ಅವಕಾಶಕ್ಕಾಗಿ ಕಾಯುತ್ತಿದ್ದವರು. ಅದರಂತೆ, ಈ ಇಬ್ಬರೂ ಈ ವಾರ ಬಿಗ್ ಮನೆ ಪ್ರವೇಶಿಸಿದ್ದಾರೆ.