Latest Kannada Nation & World
ಬಾಂಗ್ಲಾದೇಶ ಸರಣಿಗೂ ಮುನ್ನ ಶುಭ್ಮನ್ ಗಿಲ್ಗೆ ಆಘಾತ ನೀಡಲಿರುವ ಬಿಸಿಸಿಐ; ಇಶಾನ್ ಕಿಶನ್ ಟೀಮ್ ಇಂಡಿಯಾಗೆ ರಿ ಎಂಟ್ರಿ!

ರಿಷಭ್ ಪಂತ್ ಸ್ಥಾನಕ್ಕಾಗಿ ಇಶಾನ್ ಕಿಶನ್ ಅವಕಾಶ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ದುಲೀಪ್ ಟ್ರೋಫಿಯಲ್ಲಿ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಇಂಡಿಯಾ ಸಿ ಪರ ಕಣಕ್ಕಿಳಿದ ಎಡಗೈ ಬ್ಯಾಟರ್ 126 ಎಸೆತಗಳಲ್ಲಿ 114 ರನ್ ಗಳಿಸಿದ್ದಾರೆ. ಅಲ್ಲದೆ, ಇದಕ್ಕೂ ಮುನ್ನ ಬುಚ್ಚಿಬಾಬು ಟೂರ್ನಮೆಂಟ್ನಲ್ಲೂ ಶತಕ ಸಿಡಿಸಿ ಅಬ್ಬರಿಸಿದ್ದರು. ಹೀಗಾಗಿ, ಅವರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತಿಸಿದೆ. ಆದರೆ ಆತ ಕಳೆದ ವರ್ಷದ ಕೊನೆಯದಿಂದ ಈವರೆಗೂ ಭಾರತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿಲ್ಲ.