Latest Kannada Nation & World
ಬಿಗ್ ಬಾಸ್ ಮನೆಯಲ್ಲಿ ಮ್ಯೂಸಿಕಲ್ ನೈಟ್ ಬೇಕು ಎಂದ ಉಗ್ರಂ ಮಂಜು; ಕಣ್ಣೀರಿಟ್ಟ ಭವ್ಯಾ ಗೌಡ

ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಎರಡು ಗುಂಪಾಗಿ ಆಟ ಆಡುವ ಸಂದರ್ಭದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಸಮಾಧಾನ ಉಂಟು ಮಾಡಿಕೊಳ್ಳುತ್ತಾರೆ. ಈ ಬಾರಿಯೂ ಹಾಗೇ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ನೀಡಲಾಗಿದೆ. ಒಂದು ತಂಡ ಸೇವೆ ನೀಡುತ್ತಿದ್ದರೆ, ಇನ್ನೊಂದು ತಂಡ ಆ ಸೇವೆಯನ್ನು ಪಡೆದುಕೊಳ್ಳುತ್ತಿದೆ. ಹೀಗಿರುವಾಗ ಚೈತ್ರಾ ಕುಂದಾಪುರ ಮತ್ತು ಉಗ್ರಂ ಮಂಜು ಅವರು ತಮಗೆ ಲೈಟ್ ಆಫ್ ಆದ ನಂತರವೂ ಸೇವೆ ಬೇಕು ಎಂದು ಕೇಳಿದ್ದಾರೆ. ಆದರೆ ಭವ್ಯಾ ಗೌಡ ಹಾಗೂ ಅವರ ತಂಡದ ಇನ್ನಿತರರು ಸೋತು ಹೋಗಿದ್ದಾರೆ. ಇಲ್ಲ ಲೈಟ್ ಆಫ್ ಆದ ಮೇಲೂ ಸೇವೆ ಬೇಕು ಎಂದರೆ ಸಾಧ್ಯವಿಲ್ಲ ಎಂದಿದ್ದಾರೆ.