Latest Kannada Nation & World
ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಭಾವುಕ; ಸುದೀಪ್ ಸರ್ ನಿಮ್ಮನ್ನು ಈ ರೀತಿ ನೋಡಲು ಆಗ್ತಿಲ್ಲ ಎಂದ ಫ್ಯಾನ್ಸ್

ಹಿಂದಿನ ವಾರ ಸೃಜನ್ ಹಾಗೂ ಯೋಗರಾಜ್ ಭಟ್ ಅವರು ಪಂಚಾಯ್ತಿ ನಡೆಸಿಕೊಟ್ಟಿದ್ದರು. ಅದಕ್ಕೂ ಹಿಂದಿನ ವಾರ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಎಲ್ಲರಿಗೂ ಸುದೀಪ್ ಅವರ ತಾಯಿ ಮೃತರಾಗಿರುವ ಸುದ್ದಿ ಸಿಕ್ಕಿತ್ತು. ತಾಯಿಯನ್ನು ಕಳೆದುಕೊಂಡಿದ್ದರೂ ತಮ್ಮ ಕರ್ತವ್ಯ ನಿಭಾಯಿಸಿದ್ದೀರಿ ಎಂದು ಬಿಗ್ ಬಾಸ್ ಹೇಳಿದ್ದಾರೆ. “ಪ್ರೇಕ್ಷಕರನ್ನು ರಂಜಿಸುವ ಮಾಣಿಕ್ಯದಂತ ನಾಯಕನನ್ನು ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾಗದ ಭಾರ” ಎಂದು ಬಿಗ್ ಬಾಸ್ ಹೇಳಿದ್ದಾರೆ.