Latest Kannada Nation & World
ಬಿಜಿಟಿ ಸರಣಿ ಸಮಬಲ ಸಾಧಿಸಲು ಭಾರತ ತಂಡದ ಕನಸಿಗೆ ತಣ್ಣೀರು; ಸಿಡ್ನಿ ಟೆಸ್ಟ್ಗೆ ಮಳೆಯೇ ವಿಲನ್?

ಅಲ್ಲದೆ, ಬಿಬಿಸಿ ಹವಾಮಾನದ ಪ್ರಕಾರ, ಪಂದ್ಯದ ಆರಂಭದ ದಿನ ಶುಕ್ರವಾರ ಮಧ್ಯಾಹ್ನ ಸ್ವಲ್ಪ ಮಳೆ ಬೀಳಬಹುದು. ವಾರಾಂತ್ಯದಲ್ಲಿ ಸ್ವಲ್ಪ ಬಿಸಿಲಿದ್ದರೂ ಪಂದ್ಯದ 4ನೇ ದಿನವಾದ ಸೋಮವಾರ ರಾತ್ರಿ ಮಳೆ ಬೀಳುವ ಸಾಧ್ಯತೆ ಶೇ 68ರಷ್ಟಿದ್ದು, ದಿನದಾಟದ ವೇಳೆಗೆ ವಾತಾವರಣ ತಿಳಿಯಾಗುವ ಸಾಧ್ಯತೆ ಇದೆ. ಐದನೇ ದಿನವೂ ಭಾರೀ ಮಳೆಯಾಗುವ ಸಾಧ್ಯತೆಯಿದೆ, ಇದು ದಿನವಿಡೀ ಮುಂದುವರಿಯುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಒಂದು ವೇಳೆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ ಭಾರತ ತಂಡಕ್ಕೆ ದೊಡ್ಡ ನಷ್ಟವಾಗಲಿದ್ದು, ಸರಣಿ ಕಳೆದುಕೊಳ್ಳುವುದರ ಜೊತೆಗೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಇರುವ ಸಾಸಿವೆ ಕಾಳಿನಷ್ಟು ಅವಕಾಶ ಅಂತ್ಯಗೊಳ್ಳುತ್ತದೆ.