Latest Kannada Nation & World
ಬಿಟಿಎಸ್ ಸಿನಿಮಾ ಟ್ರೈಲರ್ ರಿಲೀಸ್; ನವೆಂಬರ್ 8ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗುತ್ತಿದೆ ಹೊಸಬರ ಸಿನಿಮಾ

ಬಿಟಿಎಸ್ ಚಿತ್ರಕ್ಕೆ ನಿರ್ದೇಶಕರೇ ಬಂಡವಾಳ ಹೂಡಿದ್ದಾರೆ
ಬಿಟಿಎಸ್ ಬಿಹೈಂಡ್ ದಿ ಸ್ಕ್ರೀನ್ ಚಿತ್ರವನ್ನು ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್. ಶಂಕರ್, ಅಪೂರ್ವ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಇಷ್ಟು ಜನ ನಿರ್ದೇಶಕರೇ ಸಿನಿಮಾಗೆ ಬಂಡವಾಳ ಹಾಕಿರುವುದು ವಿಶೇಷ.. ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯ, ಕೌಶಿಕ್, ಚಂದನ, ಮೇದಿನಿ ಕೆಳಮನೆ, ಆಹನ್, ಜಹಾಂಗೀರ್ ನೀನಾಸಂ ಸೇರಿದಂತೆ ಮತ್ತಿತರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹೊಸಬರ ಸಿನಿಮಾವನ್ನು ಜನರು ಯಾವ ರೀತಿ ಸ್ವೀಕರಿಸಲಿದ್ದಾರೆ ಕಾದು ನೋಡಬೇಕು.