Latest Kannada Nation & World
ತೆಲುಗು ವಾರಿಯರ್ಸ್ ವಿರುದ್ಧ ಗೆದ್ದ ಕರ್ನಾಟಕ ಬುಲ್ಡೋಜರ್ಸ್; ಸುದೀಪ್ ತಂಡದ ಗೆಲುವಿಗೆ ಕಾರಣರಾದ ಡಾರ್ಲಿಂಗ್ ಕೃಷ್ಣ

ಕರ್ನಾಟಕ ಬುಲ್ಡೋಜರ್ಸ್ ಪರ ಡಾರ್ಲಿಂಗ್ ಕೃಷ್ಣ ಅವರು ಆಡಿದ ಆಟ ಅದ್ಭುತವಾಗಿತ್ತು. ಉತ್ತಮ ಬ್ಯಾಟಿಂಗ್ ಮಾಡುವ ಮೂಲಕವೇ ಈ ಬಾರಿ ಕರ್ನಾಟಕದ ತಂಡ ಗೆಲುವು ಸಾಧಿಸಿದೆ. 113 ಅಂತಿಮ ಸ್ಕೋರ್ ಆಗಿತ್ತು. ಡಾರ್ಲಿಂಗ್ ಕೃಷ್ಣ ಈ ಆಟದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದರು. ಡಾರ್ಲಿಂಗ್ ಕೃಷ್ಣ ಅವರಿಗಿಂತ ಮೊದಲು ಬಂದ ಆಟಗಾರರೆಲ್ಲ ಕೆಲವೇ ಕೆಲವು ರನ್‌ಗಳನ್ನು ತೆಗೆಯುವ ಮೂಲಕ ಇನ್ನೇನು ಆಟದಲ್ಲಿ ಸೋಲುತ್ತೇವೆ ಎಂದು ಅಂದುಕೊಂಡಿದ್ದರೂ ಸಹ, ನಂತರದಲ್ಲಿ ಡಾರ್ಲಿಂಗ್ ಕೃಷ್ಣ ಅವರ ಅದ್ಭುತ ಬ್ಯಾಟಿಂಗ್ ಕೈ ಹಿಡಿದು, ಆಟ ಗೆಲ್ಲಿಸಿದೆ. ಕೃಷ್ಣ ಮತ್ತು ಕರಣ್ ಇಬ್ಬರೂ ಆಟದ ಕೊನೆವರೆಗೆ ಔಟ್ ಆಗದೇ ಉಳಿದುಕೊಂಡಿದ್ದರು.