ಬುದ್ದಿವಂತರಿಗಲ್ಲ, ದಡ್ಡರಿಗೆ ಮಾತ್ರ- ಸತ್ಯ ಮತ್ತು ಕಲ್ಕಿ ಕದನ ಶುರು; ಉಪ್ಪಿ UI ಸಿನಿಮಾದ ಫಸ್ಟ್ ಹಾಫ್ ಹೇಗಿದೆ?
UI Movie Review (ಯುಐ ಸಿನಿಮಾದ ಮೊದಲಾರ್ಧದ ವಿಮರ್ಶೆ): ಉಪೇಂದ್ರ ನಟನೆ ನಿರ್ದೇಶನದ ಯುಐ ಸಿನಿಮಾ ಶುಕ್ರವಾರ (ಡಿಸೆಂಬರ್ 20) ಬಿಡುಗಡೆಯಾಗಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಇಂದು ಬೆಳಗ್ಗೆ 6 ಗಂಟೆಯ ನಂತರ ಫಸ್ಟ್ ಶೋ ಆರಂಭವಾಗಿದೆ. ಯುಐ ಸಿನಿಮಾ ಈ ವರ್ಷ ಬಹುನಿರೀಕ್ಷಿತ ಕನ್ನಡ ಸಿನಿಮಾಗಳಲ್ಲಿ ಒಂದು. ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿರುವ ಸಿನಿಮಾ ಇದಾಗಿದೆ. ಈಗಾಗಲೇ ಉಪೇಂದ್ರ ಅವರು ತನ್ನ ಡಿಫರೆಂಟ್ ಸಿನಿಮಾಗಳಿಂದ ಹೆಸರು ಮಾಡಿದ್ದಾರೆ. ಈ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ, ಮುರಳಿ ಶರ್ಮಾ, ಸನ್ನಿ ಲಿಯೋನ್, ಜಿಶ್ಶು ಸೆಂಗುಪ್ತ, ನಿಧಿ ಸುಬ್ಬಯ್ಯ, ಸಾಧು ಕೋಕಿಲಾ, ಮುರಳಿ ಕೃಷ್ಣ ಮತ್ತು ಇಂದ್ರಜಿತ್ ಲಂಕೇಶ್ ಮುಂತಾದವರು ನಟಿಸಿದ್ದಾರೆ. ಉಪೇಂದ್ರ ಯುಐ ಸಿನಿಮಾ ಹೇಗಿದೆ? ಸಿನಿಮಾ ಚೆನ್ನಾಗಿದೆಯಾ? ಸೂಪರ್ಹಿಟ್ ಬ್ಲಾಕ್ಬಸ್ಟರ್ ಸಿನಿಮಾವೇ? ಯುಐ ಸಿನಿಮಾದ ಕಥೆಯೇನು? ಯುಐ ಸಿನಿಮಾ ಸುಲಭವಾಗಿ ಅರ್ಥವಾಗುತ್ತ? ಯುಐ ಸಿನಿಮಾದಲ್ಲಿ ಕಾಮಿಡಿ ಹೇಗಿದೆ? ಯುಐ ಸಿನಿಮಾದ ನೀತಿಯೇನು? ಇದು ಕೇವಲ ಬೋಧನಾ ಪ್ರಧಾನ ಸಿನಿಮಾವೇ, ಮನರಂಜನೆ ಸಾಕಷ್ಟು ಇದೆಯೇ? ಉಪೇಂದ್ರ ಈ ಯುಐ ಸಿನಿಮಾದ ಮೂಲಕ ಏನು ಸಂದೇಶ ನೀಡಿದ್ದಾರೆ ಇತ್ಯಾದಿ ಪ್ರಶ್ನೆಗಳು ಸಿನಿಮಾಪ್ರಿಯರಲ್ಲಿ ಇರಬಹುದು. ಯುಐ ಸಿನಿಮಾದ ಸಂಪೂರ್ಣ ವಿಮರ್ಶೆ ತಿಳಿಯುವ ಮುನ್ನ ಈ ಸಿನಿಮಾದ ಮೊದಲಾರ್ಧ ಹೇಗಿದೆ? ಎಂದು ತಿಳಿಯೋಣ ಬನ್ನಿ.