Latest Kannada Nation & World
ಬೃಹತ್ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಲಿದೆ ಭಾರತೀಯ ಅಂಚೆ, ಬಜೆಟ್ 2025ರಲ್ಲಿ ಮಹತ್ವದ ಘೋಷಣೆ

1.5 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮತ್ತು 2.4 ಲಕ್ಷ ಡಾಕ್ ಸೇವಕರ ವಿಸ್ತಾರವಾದ ಜಾಲವನ್ನು ಬಳಸಿಕೊಂಡು ಇಂಡಿಯಾ ಪೋಸ್ಟ್ ಅನ್ನು ಬೃಹತ್ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿಸುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಗ್ರಾಮೀಣ ಆರ್ಥಿಕತೆಗೆ ಪೂರಕವಾಗಿರುವಂತೆ ಇಂಡಿಯಾ ಪೋಸ್ಟ್ ಅನ್ನು ಮರುಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ. ಹೊಸ ಉದ್ಯಮಿಗಳು, ಮಹಿಳೆಯರು, ಸ್ವಸಹಾಯ ಗುಂಪುಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ), ದೊಡ್ಡ ವ್ಯಾಪಾರ ಸಂಸ್ಥೆಗಳ ಹೆಚ್ಚುತ್ತಿರುವ ಬೇಡಿಕೆಗಳನ್ನು ಪರಿಹರಿಸುವ ಗುರಿಯನ್ನು ಇಂಡಿಯಾ ಪೋಸ್ಟ್ ಹೊಂದಿದೆ ಎಂದು ಅವರು ಹೇಳಿದ್ದಾರೆ.