Latest Kannada Nation & World
ಬೆಂಕಿ ಲೆಕ್ಕಿಸದೆ ಶಾಲೆಯ ಪುಸ್ತಕದ ಚೀಲ ರಕ್ಷಿಸಿದ ಬಾಲಕಿ; 8 ವರ್ಷದ ಅನನ್ಯ ಯಾದವ್ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಘಟನೆ ನಡೆದ ಬಳಿಕ, ವಿವಿಧ ಮಾಧ್ಯಮಗಳು ಬಾಲಕಿಯನ್ನು ಮಾತನಾಡಿಸಿವೆ. ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿದ ಅನನ್ಯ ಯಾದವ್, ‘ನಾನು ಶಾಲೆಯಿಂದ ಹಿಂತಿರುಗಿ ನನ್ನ ಬ್ಯಾಗನ್ನು ಗುಡಿಸಲಿನ ಚಾವಣಿಯ ಕೆಳಗೆ ಇಟ್ಟುಕೊಂಡಿದ್ದೆ. ನನ್ನ ತಾಯಿ ಪ್ರಾಣಿಗಳನ್ನು ಕಟ್ಟಿ ಹಾಕುತ್ತಿದ್ದ ಸ್ಥಳ ಇದು. ಬುಲ್ಡೋಜರ್ ಕಾರ್ಯನಿರ್ವಹಿಸುತ್ತಿರುವಾಗ, ನಮ್ಮ ಪಕ್ಕದ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿತು. ಈ ಸಮಯದಲ್ಲಿ ನನಗೆ ನನ್ನ ಶಾಲಾ ಬ್ಯಾಗ್ ಮತ್ತು ಪುಸ್ತಕಗಳು ನೆನಪಾದವು. ನನ್ನ ತಾಯಿ ನನ್ನನ್ನು ತಡೆಯಲು ಪ್ರಯತ್ನಿಸಿದರು. ಆದರೆ ನಾನು ಓಡಿಹೋಗಿ ಪುಸ್ತಕಗಳು ಮತ್ತು ಚೀಲವನ್ನು ತೆಗೆದುಕೊಂಡು ಬಂದೆ” ಎಂದು ಬಾಲಕಿ ಹೇಳಿದ್ದಾಳೆ.