Latest Kannada Nation & World
ಬೆಂಗಳೂರಲ್ಲಿ ತಮಿಳಿನ ಕಂಗುವ ಸಿನಿಮಾಕ್ಕೇ ಹೆಚ್ಚು ಶೋಗಳು, ಭೈರತಿ ರಣಗಲ್ ಚಿತ್ರಕ್ಕೆ ಸಿಕ್ಕಿದ್ದೆಷ್ಟು?

2D 3Dಯಲ್ಲಿ ಕಂಗುವ ರಿಲೀಸ್
ಇತ್ತ ಕಂಗುವ ಸಿನಿಮಾ ಶಿವ ನಿರ್ದೇಶನದಲ್ಲಿ ಮೂಡಿಬಂದಿದೆ. ನಟ ಸೂರ್ಯ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ಕಂಗುವ ಚಿತ್ರ ನವೆಂಬರ್ 14ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ಸುಮಾರು 6000 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಈ ಚಿತ್ರವನ್ನು ಕರ್ನಾಟಕದಲ್ಲಿ ಕೆವಿಎನ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ವಿಶೇಷ ಏನೆಂದರೆ 2D ಮತ್ತು 3Dಯಲ್ಲಿಯೂ ಈ ಸಿನಿಮಾ ತೆರೆಕಾಣಲಿದೆ. ಈಗಾಗಲೇ ಟ್ರೇಲರ್ ಮೂಲಕ ಹೈಪ್ ಹೆಚ್ಚಿಸಿಕೊಂಡರುವ ಈ ಸಿನಿಮಾವನ್ನು ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಿಸಲಾಗಿದೆ. ಚಿತ್ರದಲ್ಲಿ ದ್ವಿಪಾತ್ರಗಳಲ್ಲಿ ಸೂರ್ಯ ಕಾಣಿಸಿಕೊಂಡರೆ, ಖಳನಾಗಿ ಬಾಬಿ ಡಿಯೋಲ್, ದಿಶಾ ಪಟಾನಿ , ನಟರಾಜನ್ ಸುಬ್ರಮಣ್ಯಂ , ಯೋಗಿ ಬಾಬು, ಕೋವೈ ಸರಳಾ, ಆನಂದರಾಜ್, ಕೆ.ಎಸ್ ರವಿಕುಮಾರ್ ಇತರರು ನಟಿಸಿದ್ದಾರೆ.