Latest Kannada Nation & World
ಬೆಂಗಳೂರು ಎಫ್ಸಿಗೆ ಭರ್ಜರಿ ಗೆಲುವು; ಗೋವಾ ವಿರುದ್ಧ ಸೆಮಿಫೈನಲ್ ಮೊದಲ ಲೆಗ್ನಲ್ಲಿ 2-0 ಜಯ

ಗೋವಾದ ಸಂದೇಶ್ ಜಿಂಗಾನ್ ಉಡುಗೊರೆಯ ಗೋಲು ಕೊಟ್ಟರು. ಹಾಗಾಗಿ, ಬಿಎಫ್ಸಿ 1-0 ಅಂತರದಿಂದ ಮುನ್ನಡೆಯಿತು. ಬೆಂಗಳೂರಿನ ರಯಾನ್ ವಿಲಿಯಮ್ಸ್ ಅವರ ಒತ್ತಡ ತಪ್ಪಿಸಲು ಚೆಂಡನ್ನು ಹೆಡ್ ಮಾಡಿದ ಅವಧಿಯಲ್ಲಿ ಜಿಂಗಾನ್, ಗೋವಾ ಗೋಲಿನೊಳಗೆ ಹೊಕ್ಕಿತು. ಮೊದಲ ಅವಧಿಯ ಮುಕ್ತಾಯದ ಬಳಿಕ ಇತ್ತಂಡಗಳೂ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದವು. ಈ ವೇಳೆ 51ನೇ ನಿಮಿಷದಲ್ಲಿ ನಾಮ್ಗ್ಯಾಲ್ ಭುಟಿಯಾ ಅವರ ಎಡ್ಗರ್ ಮೆಂಡೇಝ್ ಅವರು ಗೋವಾ ತಂಡದ ರಕ್ಷಣಾ ವ್ಯೂಹ ಭೇದಿಸಿ ಚೆಂಡನ್ನು ಗೋಲಿನ ಪೆಟ್ಟಿಗೆಯೊಳಗೆ ಹಾಕಿದರು. ಹೀಗಾಗಿ ಅತಿಥೇಯ ತಂಡಕ್ಕೆ 2-0 ಮುನ್ನಡೆ ಲಭಿಸಿತು. ಇದೇ ಅಂತರವನ್ನು ಕೊನೆಯ ತನಕ ಕಾಯ್ದುಕೊಂಡಿತು.