Latest Kannada Nation & World
ಬ್ಯಾಚುಲರ್ಸ್‌ಗಳಿಗೆ ಪಾಠ ಮಾಡಲು ಬಂದ್ರು ಕ್ರೇಜಿಸ್ಟಾರ್ ರವಿಚಂದ್ರನ್, ರಚಿತಾ ರಾಮ್

ಬ್ಯಾಚುಲರ್‌ಗಳು ಯಾರ್ಯಾರು?
ಈ ಬಾರಿ ಗಿಲ್ಲಿನಟ, ಡ್ರೋನ್ ಪ್ರತಾಪ್, ಹುಲಿ ಕಾರ್ತಿಕ್, ಪ್ರವೀಣ್ ಜೈನ್, ಭುವನೇಶ್, ಸುನಿಲ್, ದರ್ಶನ್ ನಾರಾಯಣ್, ಪ್ರೇಮ್ ತಾಪ, ಸೂರ್ಯ, ಉಲ್ಲಾಸ್, ರಕ್ಷಕ್ ಬುಲೆಟ್ ಬ್ಯಾಚುಲರ್ಸ್‌ಗಳಾಗಿ ಕಾಣಿಸಿಕೊಳ್ಳಲಿದ್ದು ಅವರ ಮನಸು ಕದಿಯುವ ಏಂಜಲ್‌ಗಳು ಯಾರಾಗಲಿದ್ದಾರೆ ಅನ್ನೋದು ಕಾದು ನೋಡಬೇಕಿದೆ. ಬ್ಯಾಚುಲರ್ಸ್‌ಗಳಿಗೆ ಭರ್ಜರಿ ಆಗಿ ಪ್ರೀತಿ ಪಾಠ ಮಾಡಲು ಕನಸುಗಾರ, ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾರಾಮ್ ತೀರ್ಪುಗಾರರಾಗಿ ಇರಲಿದ್ದಾರೆ. ತರ್ಲೆ ಮಾತು, ವಿಭಿನ್ನ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದ ನಿರಂಜನ್ ದೇಶಪಾಂಡೆ ಶೋನ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ.