Latest Kannada Nation & World
ಬ್ಯಾನ್ ಆಯ್ತು ಚಾಟ್‌ಜಿಪಿಟಿ, ಡೀಪ್‌ಸೀಕ್; ವಿತ್ತ ಸಚಿವಾಲಯ ಇಂತಹ ನಿರ್ಧಾರ ಕೈಗೊಂಡಿರುವುದೇಕೆ- ಇಲ್ಲಿದೆ ವಿವರಣೆ

ಜಾಗತಿಕ ಮಟ್ಟದಲ್ಲೂ ಡೀಪ್‌ಸೀಕ್ ಬಳಕಗೆ ನಿರ್ಬಂಧ
ಇದಕ್ಕೂ ಮೊದಲು, ವಿಶ್ವದ ಅನೇಕ ದೇಶಗಳು ಡೀಪ್‌ಸೀಕ್ ಬಳಕೆಯ ಮೇಲೆ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಿವೆ. ದತ್ತಾಂಶ ಸುರಕ್ಷತೆಯ ಅಪಾಯಗಳನ್ನು ಉಲ್ಲೇಖಿಸಿ ಮತ್ತು ಅದರ ಬಗ್ಗೆ ಎಚ್ಚರಿಕೆ ನೀಡಿದೆ. ಕಳೆದ ವಾರ, ತೈವಾನ್ ತನ್ನ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ, ಚೀನಾದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಟೂಲ್ ಡೀಪ್‌ಸೀಕ್ ಅಪ್ಲಿಕೇಶನ್ ಬಳಸದಂತೆ ಆದೇಶಿಸಿತು. ಅದೇ ಸಮಯದಲ್ಲಿ, ಯುಎಸ್ ಕಾಂಗ್ರೆಸ್ ಕೂಡ ಸರ್ಕಾರಿ ಕಚೇರಿಗಳಲ್ಲಿ ಚೀನಾ ಮೂಲದ ಎಐ ಅಪ್ಲಿಕೇಶನ್ ಡೀಪ್‌ಸೀಕ್ ಡೌನ್‌ಲೋಡ್ ಮಾಡಿ ಬಳಸದಂತೆ ಎಚ್ಚರಿಸಿದೆ. ಬ್ರಿಟನ್ ಕೂಡ ತನ್ನ ನಾಗರಿಕರಿಗೆ ಇಂತಹ ಎಚ್ಚರಿಕೆ ನೀಡಿರುವುದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.