Latest Kannada Nation & World
ಭಾರತದಲ್ಲಾಗಿದ್ರೆ ಟ್ರಂಪ್, ಕಮಲಾ ಹ್ಯಾರಿಸ್ ಚುನಾವಣಾ ಪ್ರಚಾರ ಹೀಗಿರುತ್ತಿತ್ತು- ಎಐ ಕಟ್ಟಿಕೊಟ್ಟ ಚಿತ್ರಣ ಇಲ್ಲಿದೆ

ರೋಡ್ ಶೋ, ದಲಿತರ ಮನೆಯಲ್ಲಿ ಊಟ..
ಶಾಹಿದ್ ಎಸ್‌ಕೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ ಚಿತ್ರದಲ್ಲಿ ಟ್ರಂಪ್ ಮತ್ತು ಹ್ಯಾರಿಸ್ (ಕಮಲಾ ಹ್ಯಾರಿಸ್) ತೆರೆದ ಜೀಪ್‌ನಲ್ಲಿ ರೋಡ್ ಶೋ ನಡೆಸುತ್ತಿರುವ ದೃಶ್ಯವಿದೆ. ಅವರ ಬೆಂಬಲಿಗ ಅಮೆರಿಕದ ಬಿಲಿಯನೇರ್ ಎಲೋನ್ ಮಸ್ಕ್ ಜತೆಗಿದ್ದರು. ರೋಡ್ ಶೋ ನಡೆಸುವುದಲ್ಲದೆ, ಇಬ್ಬರು ನಾಯಕರು ಮತದಾರರ ಮಕ್ಕಳನ್ನು ಎತ್ತಿಕೊಂಡು ಮುತ್ತಿಕ್ಕುವ, ವಿಜಯದ ಚಿಹ್ನೆಗಳನ್ನು ಪ್ರದರ್ಶಿಸುವ ಮತ್ತು ದಲಿತರ ಮನೆಗಳಲ್ಲಿ ಊಟ ಮಾಡುತ್ತಿರುವ ಚಿತ್ರಗಳಿವೆ. ಭಾರತದಲ್ಲಿ ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು ಸಾಮಾನ್ಯವಾಗಿ ಈ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಹಾಗಾಗಿ ಇದನ್ನೇ ಎಐ ಕಾಪಿ ಮಾಡಿ ತೋರಿಸಿದೆ.