Latest Kannada Nation & World
ಭಾರತದಲ್ಲಿ ಇಂದಿನ ಟಾಪ್ 10 ಒಟಿಟಿ ಸಿನಿಮಾಗಳು ಯಾವುವು? ಪ್ರೈಮ್ ವಿಡಿಯೋದಲ್ಲಿ 9ನೇ ಸ್ಥಾನಕ್ಕೆ ಸರಿದ ರಜನಿಕಾಂತ್ ಚಿತ್ರ
10 ott movies in india: ಈ ಚಳಿಗಾಲದಲ್ಲಿ ಮನೆಯಲ್ಲಿಯೇ ಕುಳಿತು ಸಿನಿಮಾ ನೋಡುವವರಿಗೆ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜಿಯೋ ಸಿನಿಮಾ, ಜೀ5 ಮುಂತಾದ ಒಟಿಟಿಗಳಲ್ಲಿ ಹಲವು ಸಿನಿಮಾಗಳು ಇವೆ. ಈ ಲೇಖನದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈಗ ಟಾಪ್ 10ನಲ್ಲಿರುವ ಸಿನಿಮಾಗಳು ಯಾವುವು ಎಂದು ನೋಡೋಣ. ಅಚ್ಚರಿಯಿಂದರೆ ಭಾರತದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈಗ ಅಮೆರಿಕದ ರೆಡ್ ಒನ್ ಸಿನಿಮಾ ಟಾಪ್ 1ರಲ್ಲಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸೋಮವಾರ (ಡಿಸೆಂಬರ್ 16) ಟಾಪ್ 10 ಸಿನಿಮಾಗಳ ಪಟ್ಟಿಯಲ್ಲಿ ಕ್ರಿಸ್ಮಸ್ ಸಂಭ್ರಮದ ರೆಡ್ ಒನ್, ಕಂಗುವಾ, ಮೆಕ್ಯಾನಿಕ್ ರಾಕಿ, ಅಗ್ನಿ, ಮಟ್ಕಾ, ಪುಷ್ಪ ದಿ ರೈಸ್, ಸರ್, ಸ್ತ್ರೀ 2, ವೆಟ್ಟೈಯನ್, ಬ್ಲಡಿ ಬೆಗ್ಗರ್ ಸಿನಿಮಾಗಳು ಸ್ಥಾನ ಪಡೆದಿವೆ. ರಜನಿಕಾಂತ್ ನಟನೆಯ ವೆಟ್ಟೈಯನ್ ಸಿನಿಮಾ ಒಂಬತ್ತನೇ ಸ್ಥಾನಕ್ಕೆ ಸರಿದಿದೆ.