Latest Kannada Nation & World
ಈ ದಿನದಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ನಿತ್ಯಾ ಮೆನನ್ ನಟನೆಯ ತಮಿಳಿನ ಕಾದಲಿಕ್ಕ ನೆರಮಿಲ್ಲೈ ಸಿನಿಮಾ; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

ಐವಿಎಎಫ್ ಕುರಿತ ಸಿನಿಮಾ
ಕಾದಲಿಕ್ಕ ನೆರಮಿಲ್ಲೈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡು ಕೇವಲ ನಾಲ್ಕು ವಾರಗಳಲ್ಲಿ ಒಟಿಟಿಗೆ ಬರಲು ಸಜ್ಜಾಗಿದೆ. ಜನವರಿ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಇದೀಗ ಒಟಿಟಿಗೆ ಬರಲು ರೆಡಿಯಾಗಿದೆ. ಕಾದಲಿಕ್ಕ ನೆರಮಿಲ್ಲೈ ಚಿತ್ರವನ್ನು ಕೃತಿಕಾ ಉದಯನಿಧಿ ನಿರ್ದೇಶಿಸಿದ್ದಾರೆ. ಈ ಚಿತ್ರವು ಹಾಸ್ಯ ಮತ್ತು ಪ್ರಸ್ತುತ ಪೀಳಿಗೆಯ ಸಂಬಂಧಗಳ ಮಿಶ್ರಣವಾಗಿದೆ. ಇಡೀ ಸಿನಿಮಾ ಐವಿಎಎಫ್‌ನಲ್ಲಿನ ಅವ್ಯವಸ್ಥೆ ಮತ್ತು ನಂತರದ ಬಂಧಗಳ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಜಯಂ ರವಿ, ನಿತ್ಯಾ, ಯೋಗಿ ಬಾಬು, ಲಾಲ್, ವಿನಯ್ ರಾಯ್, ಜಾನ್ ಕೊಕ್ಕನ್, ಟಿಜೆ ಭಾನು, ಲಕ್ಷ್ಮಿ ರಾಮಕೃಷ್ಣನ್ ಮತ್ತು ವಿನೋದಿನಿ ಪ್ರಮುಖ ಪಾತ್ರಗಳಲ್ಲಿದ್ದಾರೆ.