Latest Kannada Nation & World
ಭಾರತದ ಜಿಡಿಪಿ ಬೆಳವಣಿಗೆ ಶೇ 7.2, ಗ್ರಾಹಕ ಹಣದುಬ್ಬರ ಶೇ 4.5; ಆರ್‌ಬಿಐ ವಿತ್ತೀಯ ನೀತಿ ಸಭೆ ತೀರ್ಮಾನಿಸಿದ ಪ್ರಮುಖ ಅಂಶಗಳಿವು

ಮುಂಬಯಿ: ಮಾರುಕಟ್ಟೆಯ ವಿಸ್ತೃತ ನಿರೀಕ್ಷೆಗಳಿಗೆ ಅನುಗುಣವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ವಿತ್ತೀಯ ನೀತಿ ಸಭೆಯ ತೀರ್ಮಾನಗಳು ಪ್ರಕಟವಾಗಿವೆ. ಇದರಂತೆ, ರೆಪೋ ರೇಟ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಹಣದುಬ್ಬರದ ಅಪಾಯವನ್ನು ಉಲ್ಲೇಖಿಸಿದ ಆರ್‌ಬಿಐ, ವಿತ್‌ಡ್ರಾವಲ್ ಆಫ್ ಅಕಮೊಡೇಷನ್ ನಿಲುವನ್ನು ತಟಸ್ಥ ಎಂದು ನಮೂದಿಸಿದೆ. ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ಪ್ರಮಾಣವನ್ನೂ ಅಂದಾಜಿಸಿರುವ ಆರ್‌ಬಿಐ ವಿತ್ತೀಯ ನೀತಿ ಸಭೆ, ಹಣದುಬ್ಬರದ ಅಪಾಯವನ್ನು ಎತ್ತಿ ತೋರಿಸಿದೆ. ಅಲ್ಲದೆ, ಇಂಧನ ದರ ಏರಿಕೆ ಮತ್ತು ಪೂರಕವಲ್ಲದ ಬೆಳವಣಿಗೆಗಳ ಕಾರಣ ಗ್ರಾಹಕ ಹಣದುಬ್ಬರ ಸೂಚ್ಯಂಕದಲ್ಲಿ ಏರಿಕೆ ದಾಖಲಾಗಿದೆ ಎಂದು ವಿವರಿಸಿದೆ.