Latest Kannada Nation & World
ಭಾರತ ಎ ತಂಡದಲ್ಲಿ ಕೊಹ್ಲಿ, ರೋಹಿತ್ಗೆ ಸ್ಥಾನ, ಕರುಣ್ ನಾಯರ್ಗೂ ಅವಕಾಶ?

ಪಿಟಿಐ ವರದಿಯ ಪ್ರಕಾರ, ಕೆಲವು ಪ್ರಮುಖ ಭಾರತೀಯ ಟೆಸ್ಟ್ ಆಟಗಾರರು ಪ್ರವಾಸ ಪಂದ್ಯಗಳಿಗೆ ‘ಎ’ ತಂಡದ ಭಾಗವಾಗಲಿದ್ದಾರೆ. ಇದು ಪ್ರಸ್ತುತ ತಮ್ಮ ತಮ್ಮ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಹೊಂದಿರುವ ಆಟಗಾರರಿಗೆ ಇದು ಒತ್ತಡವನ್ನು ಉಂಟು ಮಾಡಬಹುದು. ಐಪಿಎಲ್ 2025ರ ಪ್ಲೇಆಫ್‌ಗಳು ಮೇ 20, 21 ಮತ್ತು 23 ರಂದು ನಡೆಯಲಿದ್ದು, ಫೈನಲ್ ಮೇ 25ರಂದು ನಡೆಯಲಿದೆ. ಐಪಿಎಲ್ ನಾಕೌಟ್ ಹೊತ್ತಿನಲ್ಲಿ ಭಾರತ ಎ ತಂಡವನ್ನು ಪ್ರಕಟಿಸಬಹುದು.