Latest Kannada Nation & World
ಭಾರತ ತಂಡವನ್ನು ಮತ್ತೆ ಟಾರ್ಗೆಟ್ ಮಾಡಿದ ಆಸ್ಟ್ರೇಲಿಯನ್ ಮೀಡಿಯಾ: ರವೀಂದ್ರ ಜಡೇಜಾ ಪತ್ರಿಕಾಗೋಷ್ಠಿಯಲ್ಲಿ ವಿವಾದ
ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ ಅವರ ಅನುಮತಿಯಿಲ್ಲದೆ ಅವರ ಮಕ್ಕಳ ಚಿತ್ರೀಕರಣ ನಡೆಸಲು ಮುಂದಾದ ಚಾನೆಲ್ 7 ಅವರ ಖಾಸಗಿತನವನ್ನು ಅತಿಕ್ರಮಿಸಿತು. ಕೊಹ್ಲಿಯಂತಹ ಸೂಪರ್ ಸ್ಟಾರ್ನನ್ನು ಸಾರ್ವಜನಿಕ ವಲಯದಲ್ಲಿ ಚಿತ್ರೀಕರಿಸುವುದನ್ನು ಮಾಧ್ಯಮಗಳು ತಡೆಯುವ ಯಾವುದೇ ಲಿಖಿತ ನಿಯಮವಿಲ್ಲ. ಆದರೆ, ಅವರ ಕುಟುಂಬವನ್ನು, ವಿಶೇಷವಾಗಿ ಅವರ ಮಕ್ಕಳನ್ನು ಸೆರೆ ಹಿಡಿಯಲು ಕೊಹ್ಲಿ ಅನುಮತಿ ಕಡ್ಡಾಯ. ಇದಕ್ಕಾಗಿ ಕೊಹ್ಲಿ ತಾಳ್ಮೆ ಕಳೆದುಕೊಂಡರು. ಚಾನೆಲ್ 7 ಮಹಿಳಾ ವರದಿಗಾರ್ತಿಯೊಂದಿಗೆ ವಾಗ್ವಾದ ನಡೆಸಿದರು. ಭಾರತೀಯ ಪತ್ರಕರ್ತರೊಬ್ಬರ ಪ್ರಕಾರ, ಕೊಹ್ಲಿ ತಾಳ್ಮೆ ಕಳೆದುಕೊಳ್ಳಲಿಲ್ಲ. ವಾಸ್ತವವಾಗಿ, ಅವರು ಆಸ್ಟ್ರೇಲಿಯಾದ ಮಾಧ್ಯಮಗಳ ವಿನಂತಿ ಮಾಡಿಕೊಂಡರು ಎಂದಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ 1-1 ರಲ್ಲಿ ಸಮಬಲಗೊಂಡಿದೆ.