Latest Kannada Nation & World
ಭಾರೀ ಮೊತ್ತಕ್ಕೆ ಜ್ಯೂ ಎನ್‌ಟಿಆರ್ ದೇವರ ಒಟಿಟಿ ರೈಟ್ಸ್ ಮಾರಾಟ; ಸ್ಟ್ರೀಮಿಂಗ್ ಯಾವಾಗ? ಯಾವ ಪ್ಲಾಟ್‌ಫಾರ್ಮ್?

ತಾರಕ್ ಅಭಿನಯವೇ ಸಿನಿಮಾದ ಪ್ಲಸ್ ಪಾಯಿಂಟ್
ಇತ್ತೀಚೆಗೆ ಬಿಡುಗಡೆಯಾದ ದೇವರ ಹಾಡುಗಳು, ಗ್ಲಿಂಪ್ಸ್, ಟೀಸರ್ ಮತ್ತು ಟ್ರೇಲರ್ ಬಹಳ ಆಕರ್ಷಕವಾಗಿವೆ. ಅಲ್ಲದೆ, ದೇವರ ಚಿತ್ರದಲ್ಲಿನ ಆಕ್ಷನ್ ಎಪಿಸೋಡ್ ತುಂಬಾ ಹೆಚ್ಚಾಗಿದೆ ಮತ್ತು ವಿಶೇಷವಾಗಿ ಸೆಕೆಂಡ್ ಹಾಫ್ ಬಹಳ ಅದ್ಭುತವಾಗಿದೆ ಎಂದು ಹಲವರು ವಿಮರ್ಶೆಗಳನ್ನು ನೀಡಿದ್ದಾರೆ. ತಾರಕ್ ಅಭಿನಯವೇ ಸಿನಿಮಾಗೆ ದೊಡ್ಡ ಶಕ್ತಿಯಾಗಿದ್ದು ದ್ವಿತೀಯಾರ್ಧದಲ್ಲಿ ಜಾನ್ವಿ ಕಪೂರ್ ಎಂಟ್ರಿಯಾಗಲಿದೆ ಎಂದು ವರದಿಯಾಗಿದೆ. ಅಲ್ಲದೇ ದೇವರ ಚಿತ್ರದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಟಾಲಿವುಡ್‌ನಿಂದ ಬಾಲಿವುಡ್‌ಗೆ ದೇವರ ಪ್ರಚಾರ ನಡೆಯುತ್ತಿದೆ. ನಿರ್ದೇಶಕ ಕೊರಟಾಲ ಶಿವ ಹಲವು ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ.