Astrology
ಭುವನಗಿರಿ ರಾಯರ ಮಠದಲ್ಲಿ ವಿಷ್ಣು ಸಹಸ್ರನಾಮ ಮಹಾಯಜ್ಞ; ಸಾಮೂಹಿಕ ಪಾರಾಯಣ ಅಭಿಯಾನದಲ್ಲಿ ನೀವೂ ಪಾಲ್ಗೊಳ್ಳಬಹುದು

ಏನು ಫಲ?
ಶ್ರೀವಿಷ್ಣುಸಹಸ್ರನಾಮ ಪಾರಾಯಣಕ್ಕೆ ಇರುವ ಫಲಗಳನ್ನು ಲೆಕ್ಕಹಾಕಲು ಸಾಧ್ಯವೇ ಇಲ್ಲ. ನಾವು ಕೇಳಿದ್ದು, ಕೇಳಬೇಕು ಎಂದುಕೊಂಡಿರುವುದು, ಕೇಳಲು ಮರೆತಿರುವುದು, ಈಗ ನಮಗೆ ಬೇಕಾದ್ದು, ಮುಂದೆ ನಮಗೆ ಬೇಕಾಗಬಹುದಾದ್ದು… ಎಲ್ಲವನ್ನೂ ದೇವರು ಯಥೇಚ್ಛವಾಗಿ ಕೊಡುತ್ತಾನೆ. ಮುಖ್ಯವಾಗಿ “ನ ವಾಸುದೇವ ಭಕ್ತಾನಾಮಶುಭಂ ವಿದ್ಯತೇ ಕ್ವಚಿತ್” ಎನ್ನುವ ಮಾತಿನಂತೆ ವಿಷ್ಣುಸಹಸ್ರನಾಮ ಪಾರಾಯಣ ಮಾಡುವವರಿಗೆ “ಅಶುಭ” ಎನ್ನುವುದೇ ಇರುವುದಿಲ್ಲ. ಮೃತ್ಯು ಭೀತಿ ಮತ್ತು ರೋಗ ಭೀತಿಯೂ ಇರುವುದಿಲ್ಲ. ಹೀಗಾಗಿಯೇ ವಿಷ್ಣುಸಹಸ್ರನಾಮದ ಫಲವನ್ನು ಎಷ್ಟು ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ ಎಂದು ಹೇಳುವುದು. ಅದು ಜನ್ಮಜನ್ಮಾಂತರಕ್ಕೂ ಪಾರಾಯಣ ಮಾಡುವವರನ್ನೂ, ಶ್ರವಣ ಮಾಡುವವರನ್ನೂ ಕಾಪಾಡುತ್ತದೆ.