ಭೂಮಿಕಾಳಿಗೆ ಸುಧಾ ಕೈತುತ್ತು, ಮನೆಕೆಲಸದವರನ್ನು ಕೆಲಸದಿಂದ ತೆಗೆದ ಗೌತಮ್, ಶಕುಂತಲಾ ಪಟಾಲಂಗೆ ಹೊಟ್ಟೆ ತುಂಬಿಸೋರು ಯಾರು? ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿ ನವೆಂಬರ್ 19ರ ಕಥೆ: ಸುಧಾ ಮನೆಗೆ ಬಂದಿರುವುದು ಗೌತಮ್‌ಗೆ ಖುಷಿ ತಂದಿದೆ. “ನಾವಿಬ್ಬರು ಮಾತನಾಡುತ್ತಿರುವಾಗ ನಿನ್ನದ್ದೇನು” ಎಂದು ಆನಂದ್‌ಗೆ ಬಯ್ಯುತ್ತಾರೆ. “ಅರೇ, ಸುಧಾಳನ್ನು ಕರೆದುಕೊಂಡು ಬಂದದ್ದು ನಾನು, ನಾನು ಮೂರನೆಯವನಾಗಿ ಬಿಟ್ನ” ಎಂದು ತಮಾಷೆಗೆ ಕೇಳುತ್ತಾನೆ. ಈ ರೀತಿ ಗೌತಮ್ ಮತ್ತು ಆನಂದ್ ತಮಾಷೆ ಮಾಡುತ್ತಿರುವಾಗ ಸುಧಾ ಮೌನವಾಗಿದ್ದಾಳೆ. “ಯಾಕಮ್ಮ ಡಲ್ ಹೊಡೆಯುತ್ತಿದ್ದೀ” ಎಂದು ಆನಂದ್ ಕೇಳುತ್ತಾರೆ. “ಹೊಸ ಜಾಗ, ಹೊಸ ಜನ, ಸಹಜ, ಸರಿಯಾಗುತ್ತೆ” ಎಂದು ಗೌತಮ್ ಹೇಳುತ್ತಾರೆ. “ಏನೂ ಯೋಚನೆ ಮಾಡಬೇಡ, ಇವರು ಎಷ್ಟು ಗ್ರೇಟೋ, ಅತ್ತಿಗೆಯೂ ಅಷ್ಟೇ ಗ್ರೇಟು” ಎಂದು ಆನಂದ್ ಹೇಳುತ್ತಾರೆ. “ಅವರಿಗೆ ಅಂತಲ್ಲ, ಎಲ್ಲರಿಗೂ ಇಷ್ಟವಾಗುತ್ತಾಳೆ” ಎಂದು ಗೌತಮ್ ಹೇಳುತ್ತಾರೆ. “ನನಗೆ ನಿರಾಳವಾಯಿತು” ಎಂದು ಗೌತಮ್ ಹೇಳುತ್ತಾರೆ. “ಇವಳನ್ನು ಇಲ್ಲಿ ಬಿಟ್ಟೆ, ಮನೆಯಲ್ಲಿ ನಾನೇ ಕೆಲಸ ಮಾಡಬೇಕು” ಎಂದು ಆನಂದ್ ಹೇಳುತ್ತಾರೆ. “ಏನೂ ಮಾಡಲಾಗದು, ಯಾರು ಎಲ್ಲಿಗೆ ಸೇರಬೇಕೋ ಅಲ್ಲಿಗೆ ಸೇರುತ್ತಾರೆ, ಎವರ್‌ಥಿಂಗ್ ಈಸ್ ಡೆಸ್ಟಿನಿ” ಎಂದು ಗೌತಮ್ ಹೇಳುತ್ತಾರೆ.