Astrology
ಭ್ರೂಣಹತ್ಯೆ, ಲೈಂಗಿಕ ದೌರ್ಜನ್ಯ, ಮಹಿಳೆಯರ ಮೇಲೆ ಕೆಟ್ಟ ದೃಷ್ಟಿ ಬೀರುವವರಿಗೆ ನರಕದಲ್ಲಿ ಸಿಗುವ ಶಿಕ್ಷೆಯಿದು -ಗರುಡ ಪುರಾಣ

ಸ್ನೇಹಿತನ ಹೆಂಡತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವವರು
ಕೆಲವು ಪುರುಷರು ತಮ್ಮ ಸ್ನೇಹಿತರಿಗೆ ಮೋಸ ಮಾಡಲು ಪ್ರಯತ್ನಿಸುತ್ತಾರೆ, ಮತ್ತು ಅವನ ಪತ್ನಿಯರೊಂದಿಗೆ ಸಂಬಂಧ ಹೊಂದಿರುತ್ತಾರೆ. ಅಂತಹವರಿಗೆ ಯಮರಾಜನು ನರಕದಲ್ಲಿ ಅತ್ಯಂತ ಭೀಕರ ಶಿಕ್ಷೆಯನ್ನು ನೀಡುತ್ತಾನೆ. ಅಂತಹ ಜನರು, ಹಲವು ವರ್ಷಗಳ ಕಾಲ ನರಕದಲ್ಲಿ ಹಿಂಸೆ ಅನುಭವಿಸಿದ ನಂತರ, ಭೂಮಿಗೆ ಹಿಂತಿರುಗುತ್ತಾರೆ. ಅಂಥವರು ಕತ್ತೆಯಾಗಿ ಹುಟ್ಟಬೇಕಾಗುತ್ತದೆ.