Astrology
ಮಕರ ರಾಶಿಯಲ್ಲಿ ಶುಕ್ರನ ಪಯಣ; ಈ ಎರಡು ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ, ಹಣ ಹುಡುಕಿ ಬರುತ್ತೆ

ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವ ಶುಕ್ರನು ಮಕರ ರಾಶಿಯಲ್ಲಿ ಸಾಗಲಿದ್ದಾನೆ. ಶುಕ್ರನ ಸಂಕ್ರಮಣದ ಕಾರಣ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಸಮಯವು ತುಂಬಾ ಮಂಗಳಕರವಾಗಿರುತ್ತದೆ. ಶುಕ್ರನ ಶುಭ ಅಂಶದಿಂದ ಸ್ವಂತ ಮನೆ ಕನಸು ನನಸಾಗಲಿದೆ. ಉದ್ಯೋಗದಲ್ಲಿ ಬಡ್ತಿಯ ಜೊತೆಗೆ ಭಾರೀ ಆರ್ಥಿಕ ಲಾಭ ಇರುತ್ತದೆ. ಶುಕ್ರನು ಮಕರ ರಾಶಿಯಲ್ಲಿ 2024ರ ಡಿಸೆಂಬರ್ 2 ರಿಂದ ಡಿಸೆಂಬರ್ 28 ರವರಿಗೆ ಸಂಚರಿಸುತ್ತಾನೆ. ಈ ಅವದಿಯಲ್ಲಿ ಪ್ರತಿಯೊಂದು ರಾಶಿಯವರಿಗೂ ಉತ್ತಮ ಪ್ರಯೋಜನಗಳಿವೆ. ಅದರಲ್ಲೂ ಮೇಷ ಮತ್ತು ವೃಷಭ ರಾಶಿಯವರಿಗೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ತಿಳಿಯೋಣ.