Astrology
ಮಲ್ಲೇಶ್ವರದ ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ; ಸೇವಾಲಯದಿಂದಲೇ ಹೆಚ್ಚು ಜನಪ್ರಿಯ-degula darshana navratri festival at sri vasavi kannika parameshwari temple in malleswaram bangalore rmy ,ರಾಶಿ ಭವಿಷ್ಯ ಸುದ್ದಿ

ನವರಾತ್ರಿಯಲ್ಲಿ ದೇವಿಗೆ ಯಾವ ಅಲಂಕಾರ ಮಾಡಲಾಗುತ್ತೆ?
ಅಕ್ಟೋಬರ್ 3ರ ಗುರುವಾರ ನವರಾತ್ರಿಯ ಮೊದಲ ದಿನವಾಗಿ ದೇವಿಗೆ ಶ್ರೀ ರಕ್ಷಾಂಬಿಕ ಅಲಂಕಾರ ಮಾಡಲಾಗಿತ್ತು. ನವರಾತ್ರಿಯ 2ನೇ ದಿನ (ಅಕ್ಟೋಬರ್ 4ರ ಶುಕ್ರವಾರ) ಶ್ರೀ ವೈಷ್ಣವಿ ಭಾರ್ಗವಿ ಅಲಂಕಾರ, ಮೂರನೇ ದಿನ (ಅಕ್ಟೋಬರ್ 5ರ ಶನಿವಾರ) ಶ್ರೀಕೃಷ್ಣ ಅಲಂಕಾರ, ನವರಾತ್ರಿಯ 4ನೇ (ಅಕ್ಟೋಬರ್ 6ರ ಭಾನುವಾರ) ದಿನ ದುಮವತಿ ಅಲಂಕಾರ, ನವರಾತ್ರಿಯ 5ನೇ ದಿನ (ಅಕ್ಟೋಬರ್ 7ರ ಸೋಮವಾರ) ಶ್ರೀತಾರ ಅಲಂಕಾರ, ನವರಾತ್ರಿಯ 6ನೇ ದಿನ (ಅಕ್ಟೋಬರ್ 8ರ ಮಂಗಳವಾರ) ತ್ರಿಪುರ ಸುಂದರಿ ಅಲಂಕಾರ, 7ನೇ ದಿನ (ಅಕ್ಟೋಬರ್ 9ರ ಬುಧವಾರ) ಮಹಾಸರಸ್ವತಿ ಅಲಂಕಾರ, 8ನೇ ದಿನ (ಅಕ್ಟೋಬರ್ 10ರ ಗುರುವಾರ) ಭದ್ರಕಾಳಿ ಅಲಂಕಾರ, 9ನೇ ದಿನ (ಅಕ್ಟೋಬರ್ 11ರ ಶುಕ್ರವಾರ) ಕಾಳಿಂಗಮರ್ಧನಿ ಅಲಂಕಾರ ಹಾಗೂ ಅಕ್ಟೋಬರ್ 12ರ ಶನಿವಾರ ವಿಜಯದಶಮಿಯಂದು ವಿಜಯದುರ್ಗ ಅಲಂಕಾರವನ್ನು ಮಾಡಲಾಗುತ್ತದೆ.