Latest Kannada Nation & World
ದೆಹಲಿಯ ಕರ್ತವ್ಯಪಥದಲ್ಲಿ ಭವ್ಯ ಪರೇಡ್ ಶುರು; ಮಿನಿ ಭಾರತ ಅನಾವರಣ, ಯೋಧರು, ಕಲಾವಿದರ ದೇಶಾಭಿಮಾನದ ಮಹಾಸಂಗಮ

300 ಸಾಂಸ್ಕೃತಿಕ ಕಲಾವಿದರು ದೇಶದ ವಿವಿಧ ಭಾಗಗಳಿಂದ ಬಂದ ಸಂಗೀತ ವಾದ್ಯಗಳೊಂದಿಗೆ ‘ಸಾರೆ ಜಹಾನ್ ಸೆ ಅಚ್ಛಾ’ ನುಡಿಸುವ ಮೂಲಕ ಮೆರವಣಿಗೆಗೆ ಚಾಲನೆ ದೊರಕಿತು. ವಾದ್ಯಗಳ ಮೇಳವು ಶೆಹನಾಯಿ, ಸುಂದರಿ, ನಾದಸ್ವರಂ, ಬೀನ್, ಮಶಕ್ ಬೀನ್, ರಣಸಿಂಗ – ರಾಜಸ್ಥಾನ, ಕೊಳಲು, ಕರ್ನಾಟಕದ ಕರಡಿ ಮಜಲು, ಮೊಹೂರಿ, ಸಂಖ, ತುಟಾರಿ, ಧೋಲ್, ಗಾಂಗ್, ನಿಶಾನ್, ಚಾಂಗ್, ತಾಶಾ, ಸಾಂಬಲ್, ಚೆಂಡ, ಇಡಕ್ಕಾ, ಲೆಜಿಮ್, ಲೆಜಿಮ್, , ಗುಡುಮ್ ಬಾಜಾ, ತಾಳಮ್ ಮತ್ತು ಮೊನ್ಬಾಹ್ ವಿಶೇಷವಾಗಿದ್ದವು. ಇಡೀ ಭಾರತದ ಕಲೆ ಹಾಗೂ ಸಂಸ್ಕೃತಿಯೇ ಅಲ್ಲಿ ಮೇಳೈಸಿದಂತಿತ್ತು.